ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಕ್ಕೆ ಹೇಳಿಕೆ: ಹುದ್ದೆಯಿಂದ ಖೋಬ್ರಾಗಡೆಗೆ ಕೋಕ್‌

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೀಸಾ ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ಕಳೆದ ವರ್ಷ ಬಂಧಿತರಾಗಿದ್ದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರು ಇದೀಗ ಕೇಂದ್ರ ಸರ್ಕಾರದಿಂದ ಕಠಿಣ ಕ್ರಮಕ್ಕೆ ಗುರಿಯಾಗಿದ್ದಾರೆ.

ದೇವಯಾನಿ ಅವರ ಮೇಲೆ ಅಧಿಕೃತ­ವಾಗಿ ಅನುಮತಿ ಪಡೆಯದೆ ಮಾಧ್ಯಮ­ಗಳೊಂದಿಗೆ ಮಾತನಾಡಿದ ದೂರನ್ನು ಹೊರಿಸಿ ವಿದೇಶಾಂಗ ವ್ಯವಹಾರಗಳ ಸಚಿ­­ವಾಲಯವು ಈ ಕ್ರಮ ತೆಗೆದು­ಕೊಂ­ಡಿದೆ. ಶಿಸ್ತು ಕ್ರಮ ಮತ್ತು ಆಡಳಿತಾತ್ಮಕ ಕ್ರಮಕ್ಕೆ ಮುಂದಾಗಿ ತನಿಖೆಗೆ ಚಾಲನೆ ನೀಡಿರುವ ಸಚಿವಾಲಯವು ಖೋಬ್ರಾ­ಗಡೆ ಅವರಿಗೆ ಯಾವುದೇ ಹುದ್ದೆ ತೋರದೆ ‘ಕಡ್ಡಾಯ ಕಾಯುವಿಕೆ’ ಪಟ್ಟಿಯಲ್ಲಿ ಇರಿಸಿದೆ.

ಅಮೆರಿಕದಿಂದ ಜನವರಿಯಲ್ಲಿ ವಾಪಸ್‌ ಬಂದ ಮೇಲೆ ಅವರು ಸಚಿವಾ­ಲ­ಯದ ಅಭಿವೃದ್ಧಿ ಸಹಭಾಗಿತ್ವ ವಿಭಾ-­ಗ­­ದಲ್ಲಿ ನಿರ್ದೇಶಕ ಶ್ರೇಣಿಯ ಅಧಿಕಾರಿ­ಯಾಗಿ ಕೆಲಸ ಮಾಡುತ್ತಿದ್ದರು.

ತಾನು ಯಾವುದೇ ತಪ್ಪು ಎಸಗಿಲ್ಲ ಎಂದು ದೇವಯಾನಿ ಸಮರ್ಥಿಸಿಕೊಂಡಿ­ದ್ದಾರೆ. ತಮ್ಮ ಮಕ್ಕಳಿಗೆ ಎರಡು ಪಾಸ್‌­ಪೋರ್ಟ್‌ ಕೊಡಿಸಿದ್ದಾಗಲೀ ಅಥವಾ ಮಾಧ್ಯಮಗಳ ಜತೆ ಮಾತನಾಡಿದ್ದಾ­ಗಲೀ ತಪ್ಪು ಅಲ್ಲ ಎಂದು ಹೇಳಿದ್ದಾರೆ.  ಮಾಧ್ಯ­ಮ­ಗಳ ಮುಂದೆ ವೈಯಕ್ತಿಯ ಅಭಿ­ಪ್ರಾಯ ಹಂಚಿ­ಕೊಳ್ಳು­ವು­ದಕ್ಕೆ ಸೇವಾ ನಿಯಮ­ಗಳಲ್ಲೇ ಅವಕಾಶ­ವಿದೆ ಎಂದು ತಿಳಿಸಿದ್ದಾರೆ.

ದೇವಯಾನಿ ಅವರ ತಂದೆ ಮತ್ತು ಮಾಜಿ ಐಎಎಸ್‌ ಅಧಿಕಾರಿ ಉತ್ತಮ್‌ ಖೋಬ್ರಾ­­ಗಡೆ ಅವರು ಕೂಡ ತಮ್ಮ ಮಗಳನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT