ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕಳ್ಳಸಾಗಣೆ: ಲಂಡನ್‌ನಲ್ಲಿ ಸತ್ಯಾರ್ಥಿ ಸಭೆ

Last Updated 28 ಜನವರಿ 2015, 14:01 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಕಾರ್ಯಕರ್ತ ಭಾರತದ ಕೈಲಾಶ್ ಸತ್ಯಾರ್ಥಿ ಅವರು  ಮುಂದಿನ ವಾರ ಗಾಲದಲ್ಲಿ ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.  

ಬ್ರಿಟಿಷ್‌ ಏಷ್ಯನ್‌ ಟ್ರಸ್ಟ್‌ ಆಯೋಜಿಸಿರುವ ಈ ಸಮ್ಮೇಳನದಲ್ಲಿ ರಾಜಕುಮಾರ ಚಾರ್ಲ್ಸ್‌ ಕೂಡ ಭಾಗವಹಿಸಲಿದ್ದಾರೆ. 
‘ಮಕ್ಕಳ ಕಳ್ಳಸಾಗಣೆ ಮತ್ತು ಬಾಲ ಕಾರ್ಮಿಕ ಪದ್ಧತಿ ವಿರುದ್ಧ ದಶಕಗಳಿಂದ ಹೋರಾಡುತ್ತಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಈ ಗಂಭೀರ ಸಮಸ್ಯೆಗಳ ವಿರುದ್ಧ ಗಮನ ಸೆಳೆಯಲು ಮತ್ತು ಅಭಿಯಾನ ಸಂಘಟಿಸಲು ಬ್ರಿಟಿಷ್‌ ಏಷ್ಯನ್‌ ಟ್ರಸ್ಟ್‌ ಪ್ರಯತ್ನಿಸುತ್ತಿದ್ದು, ಅವರ ಆಹ್ವಾನ ಸ್ವೀಕರಿಸಿರುವುದಾಗಿ  ಸತ್ಯಾರ್ಥಿ ಹೇಳಿದ್ದಾರೆ.

2007ರಲ್ಲಿ ಅಸ್ತಿತ್ವಕ್ಕೆ ಬಂದ ಬ್ರಿಟಿಷ್‌ ಏಷ್ಯನ್‌ ಟ್ರಸ್ಟ್‌  ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT