ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸ ಸರೋವರ ಯಾತ್ರೆಗೆ ಪರ್ಯಾಯ ಮಾರ್ಗ: ಪ್ರತಿಭಟನೆ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಡೆಹ್ರಾಡೂನ್‌/ಪಿತೌರಗಡ (ಪಿಟಿಐ):  ಕೈಲಾಸ ಮಾನಸ ಸರೋವರ ಯಾತ್ರೆಗೆ ನಾಥುಲಾ ಪಾಸ್‌ ಮೂಲಕ ಪರ್ಯಾಯ ಮಾರ್ಗ ಮುಕ್ತ­­ಗೊಳಿಸಿರುವುದಕ್ಕೆ ಉತ್ತರಾ­ಖಂಡದ ಕುಮಾಂವ್‌ ಪ್ರದೇಶದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ.

ಪರ್ಯಾಯ ಮಾರ್ಗದಿಂದಾಗಿ ಧಾರ್‌ಚುಲಾ, ಸಿಯಾಲೇಖ್‌ ಮೂಲಕ  ಮಾನಸ ಸರೋವರಕ್ಕೆ ತೆರಳುವ ಸಾಂಪ್ರದಾಯಿಕ ಯಾತ್ರೆಯ ಮಾರ್ಗದಲ್ಲಿ ವಾಣಿಜ್ಯ ಚಟುವಟಿಕೆ ಕೈಗೊಂಡಿರುವ ಸ್ಥಳೀಯರ ಜೀವ­ನೋ­ಪಾಯಕ್ಕೆ ಧಕ್ಕೆಯಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಕೆಲವೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿ­ಕೃತಿ ದಹಿಸಿ ಪ್ರತಿಭಟನೆ ನಡೆಸಲಾಗಿದೆ. 

  ಯಾತ್ರೆಯ ಮಾರ್ಗ ಬದಲಿಸಿದಲ್ಲಿ, ಯಾತ್ರೆಯನ್ನು ನಿರ್ವಹಿ­ಸುವ ಕುಮಾಂವ್‌ ಮಂಡಲ್‌ ವಿಕಾಸ್‌ ನಿಗಮಕ್ಕೆ (ಕೆಎಂವಿಎನ್‌) ₨ 3 ಕೋಟಿ ನಷ್ಟವಾಗುತ್ತದೆ. ಕೇಂದ್ರ ಸರ್ಕಾರ ಪ್ರತಿ ಯಾತ್ರಿಗೆ ಊಟೋಪ­ಚಾರಕ್ಕಾಗಿ   32,000 ಬಿಡುಗಡೆ ಮಾಡುತ್ತದೆ. ನೂರಾರು ಕೂಲಿ­ಯಾ­ಳು­­ಗಳು, ಸಣ್ಣ ಅಂಗಡಿ ಮಾಲೀಕ­ರಿಗೆ ಭಾರಿ ನಷ್ಟ­ವಾಗು­­ತ್ತದೆ ಎಂದು ಕೆಎಂವಿಎನ್‌ನ ಡಿ.ಕೆ. ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT