ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ತ್ಯಾಜ್ಯ ಸಂಸ್ಕರಣೆಗೆ ಕೊನೆಗೂ ಚಾಲನೆ

Last Updated 25 ಆಗಸ್ಟ್ 2014, 19:31 IST
ಅಕ್ಷರ ಗಾತ್ರ

ಬೆಂಗಳೂರು: ಮಡಿವಾಳ ಮಾರುಕಟ್ಟೆ-ಯಲ್ಲಿ ಜೈವಿಕ ತ್ಯಾಜ್ಯವನ್ನು ಗೊಬ್ಬರ-ವನ್ನಾಗಿ ಪರಿವರ್ತಿಸುವ ಸ್ವಯಂಚಾಲಿತ ಜೈವಿಕ ತ್ಯಾಜ್ಯ ಸಂಸ್ಕರಣಾ ಯಂತ್ರಕ್ಕೆ ಸೋಮವಾರ  ಪ್ರಾಯೋಗಿಕ ಚಾಲನೆ ನೀಡಲಾಯಿತು.

ಅರುಣ್‌ ಗ್ರೀನ್‌ ವೆಂಚರ್‍ಸ್‌ ಸಂಸ್ಥೆ-ಯು ಯಂತ್ರವನ್ನು ಅಭಿವೃದ್ಧಿಪಡಿಸಿದೆ. ದಿನಕ್ಕೆ 500 ಮನೆಗಳ 250 ಕೆ.ಜಿ.-ಗಳಷ್ಟು ಜೈವಿಕ ತ್ಯಾಜ್ಯವನ್ನು ಯಂತ್ರ ಸಂಸ್ಕರಣೆ ಮಾಡಲಿದೆ. 24 ಗಂಟೆ-ಗಳಲ್ಲಿ ಸಂಸ್ಕರಣೆ ಪ್ರಕ್ರಿಯೆ ಮುಗಿಯ-ಲಿದೆ. ಎಂಟು ದಿನಗಳ ಕಾಲ ಗೊಬ್ಬರ-ವನ್ನು ಶೇಖರಣೆ ಮಾಡಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಯಂತ್ರಕ್ಕೆ ಚಾಲನೆ ನೀಡಿ ಮಾತ-ನಾಡಿದ ಸಾರಿಗೆ ಸಚಿವ ರಾಮಲಿಂಗಾ-ರೆಡ್ಡಿ ‘ಈ ಯಂತ್ರವು  ಜೈವಿಕ ತ್ಯಾಜ್ಯ-ವನ್ನು ಗೊಬ್ಬರವನ್ನಾಗಿ ಪರಿವರ್ತಿಸು-ತ್ತಿದೆ. ಇದರಿಂದ ಕಸ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆ ಆಗಲಿದೆ. ನೈಸರ್ಗಿಕ ಗೊಬ್ಬ--ರವನ್ನು  ರೈತರಿಗೆ  ಉಚಿತವಾಗಿ ನೀಡುವ ಯೋಚನೆ ಇದೆ’ ಎಂದರು.

‘ಪ್ರಾಯೋಗಿಕ ಯೋಜನೆಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಘಟಕದ ಸಾಮರ್ಥ್ಯವನ್ನು ಹಂತ–ಹಂತವಾಗಿ ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.

‘ಮೊದಲು ಮಡಿವಾಳ ಮಾರುಕಟ್ಟೆ-ಯಲ್ಲಿ ಕೇವಲ 25 ಮಳಿಗೆಗಳು ಮಾತ್ರ  ಇದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಮಳಿಗೆಗಳ ಸಂಖ್ಯೆ ಹೆಚ್ಚಿದ್ದು, ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಆದ್ದರಿಂದ 13ನೇ ಹಣಕಾಸು ಆಯೋ-ಗದ ನಗರಾಭಿವೃದ್ಧಿ ಯೋಜನೆ-ಯಡಿ-ಯಲ್ಲಿ ಮಾರುಕಟ್ಟೆಯನ್ನು ನವೀಕರಿ-ಸಲು ₨ 8 ಕೋಟಿ  ಮೀಸಲಿಡಲಾಗಿದೆ’ ಎಂದು ಹೇಳಿದರು.

ಮೇಯರ್‌ ಬಿ.ಎಸ್‌. ಸತ್ಯನಾರಾ-ಯಣ, ‘ಈ ಯಂತ್ರವನ್ನು 30 ದಿನಗಳ ಕಾಲ ಮಡಿವಾಳದ ಮಾರುಕಟ್ಟೆಯಲ್ಲಿ ಪ್ರಾಯೋಗಿಕ ಬಳಕೆಗೆ ಇರಿಸಲಾಗು-ವುದು. ಯಂತ್ರವು ಯಶಸ್ವಿಯಾಗಿ ಕಾರ್ಯನಿರ್ವಹಿಸಿದರೆ, ನಗರದ ಎಲ್ಲ ಮಾರುಕಟ್ಟೆಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು’  ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT