ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಗ್ -21 ವಿಮಾನ ಪತನ: ಪೈಲಟ್ ಸಾವು

Last Updated 27 ಮೇ 2014, 13:13 IST
ಅಕ್ಷರ ಗಾತ್ರ

ಶ್ರೀನಗರ (ಪಿಟಿಐ): ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವೊಂದು ಮಂಗಳವಾರ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ ಬೆಹರಾ ಪ್ರದೇಶದಲ್ಲಿ ಪತನಗೊಂಡಿದ್ದು, ವಿಮಾನದ ಪೈಲಟ್ ಸಾವನ್ನಪ್ಪಿದ್ದಾರೆ.

ದೈನಂದಿನ ಕವಾಯತಿನಲ್ಲಿ ತೊಡಗಿದ್ದ ಮಿಗ್ -21 ವಿಮಾನವು ಇಲ್ಲಿಗೆ 45 ಕಿಮೀ ದೂರದ ಬಿಜ್ ಬೆಹರಾ ಪ್ರದೇಶದ ಮಿರ್ಹಾಮ ಬಯಲಿನಲ್ಲಿ ನೆಲಕ್ಕೆ ಅಪ್ಪಳಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ವಿಮಾನದ ಪೈಲಟ್ ರಘು ಬನ್ಸಿ ಅಪಘಾತದಲ್ಲಿ ಅಸು ನೀಗಿದ್ದಾರೆ ಎಂದು ಅವು ತಿಳಿಸಿದವು.

ವಿಮಾನವು ಇಲ್ಲಿನ ತಾಂತ್ರಿಕ ನಿಲ್ದಾಣದಿಂದ ಬೆಳಗ್ಗೆ ಹೊರಟಿತ್ತು ಎಂದು ಮೂಲಗಳು ಹೇಳಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT