ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ್ರಪಕ್ಷಗಳಿಗೆ ಮೋದಿ ಪ್ರಾತಿನಿಧ್ಯ

Last Updated 23 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದ್ದರೂ, ಮಿತ್ರ ಪಕ್ಷಗಳಿಗೆ ಸಂಪುಟದಲ್ಲಿ ಸೂಕ್ತ ಪ್ರಾತಿ­ನಿಧ್ಯ ಕಲ್ಪಿಸುವ ಚಿಂತನೆಯನ್ನು ನಿಯೋ­ಜಿತ ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ.

545 ಸದಸ್ಯ ಬಲದ ಲೋಕಸಭೆಗೆ 282 ಬಿಜೆಪಿ ಸದಸ್ಯರು ಆಯ್ಕೆ­ಯಾಗಿ­ದ್ದಾರೆ. ಆದರೂ, ಮಿತ್ರ ಪಕ್ಷಗಳಾಗಿ­ರುವ ಶಿವಸೇನೆ, ಟಿಡಿಪಿ, ಎಲ್‌ಜೆಪಿ, ಮತ್ತಿತರ ಪಕ್ಷಗಳನ್ನು ಸಂಪುಟಕ್ಕೆ ಸೇರಿಸಿ­ಕೊಳ್ಳುವ ಇಂಗಿತವನ್ನು ಮೋದಿ ವ್ಯಕ್ತ­ಪಡಿಸಿದ್ದಾರೆ.

ಶಿವಸೇನೆ ಹದಿನೆಂಟು ಸದಸ್ಯರು ಆಯ್ಕೆ­ಯಾಗಿದ್ದಾರೆ. ತೆಲಗುದೇಶಂ ಪಕ್ಷದ 16 ಸದಸ್ಯರು ಚುನಾಯಿತ­ರಾಗಿದ್ದಾರೆ. ಮಿತ್ರ ಪಕ್ಷಗಳಿಗೆ ಒಂದು ಸಂಪುಟ ಮತ್ತು ಒಂದು ರಾಜ್ಯ ಸಚಿವ ಸ್ಥಾನ ನೀಡುವ ಆಲೋಚನೆ ಮೋದಿ ಅವರಿಗಿದೆ. ಆದರೆ, ಸದ್ಯದಲ್ಲೇ ನಡೆಯುವ ಮಹಾ­ರಾಷ್ಟ್ರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಶಿವಸೇನೆಗೆ ಒಂದು ಸಂಪುಟ ಮತ್ತು ಎರಡು ರಾಜ್ಯ ಸಚಿವ ಸ್ಥಾನ ನೀಡಲಿದ್ದಾರೆ. ಹಾಗೇ ಚಂದ್ರ­ಬಾಬು ನಾಯ್ಡು ಅವರನ್ನು ವಿಶ್ವಾಸ­ದಲ್ಲಿ ಇಟ್ಟುಕೊಳ್ಳಲು ಅಷ್ಟೇ ಸ್ಥಾನ ನೀಡುವ ಚಿಂತನೆ ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ದೀರ್ಘಕಾಲದ ಮಿತ್ರ ಪಕ್ಷ ಶಿರೋಮಣಿ ಅಕಾಲಿದಳ ಸಂಪುಟದಲ್ಲಿ ಪ್ರಾತಿನಿಧ್ಯ ಬೇಡ ಎಂದು ಈಗಾಗಲೇ ಹೇಳಿದೆ. ಚಂದ್ರಬಾಬು ನಾಯ್ಡು ಭಾನು­ವಾರ ಮೋದಿ ಅವರನ್ನು ಕಂಡು ಚರ್ಚಿಸಲಿದ್ದಾರೆ. ಶಿವಸೇನೆ ಉದ್ಧವ್‌ ಠಾಕ್ರೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿ­ದ್ದಾರೆ. ಎಲ್‌ಜೆಪಿ ಮುಖಂಡ ರಾಮ್‌ ವಿಲಾಸ್‌ ಪಾಸ್ವಾನ್‌ ರೈಲ್ವೆ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಮಹ­ತ್ವದ ಖಾತೆಗಳನ್ನು ಬಿಜೆಪಿ ಬಳಿಯಲ್ಲೇ ಉಳಿಸಿಕೊಳ್ಳುವ ಸುಳಿವನ್ನು ಮೋದಿ ನೀಡಿದ್ದಾರೆಂದು ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT