ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರ ಡಬಲ್ಸ್‌: ಪೇಸ್–ಹಿಂಗಿಸ್‌ ಮುನ್ನಡೆ

Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಭಾರತದ ಲಿಯಾಂಡರ್ ಪೇಸ್  ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿಯು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಮುನ್ನಡೆ ಸಾಧಿಸಿವೆ.

ಆರಂಭಿಕ ಸುತ್ತಿನಲ್ಲಿ ಪೇಸ್ ಮತ್ತು ಹಿಂಗಿಸ್ ಜೋಡಿಯು 6–2, 6–2ರಿಂದ ಸ್ಥಳೀಯ ಜೋಡಿ ಟೇಲರ್ ಫ್ರಿಟ್ಜ್ ಮತ್ತು ಸೀ ಲೂಯಿ ವಿರುದ್ಧ ಗೆದ್ದರು.

ಬೋಪಣ್ಣ ಜೋಡಿಗೆ ಜಯ: ಪುರುಷರ ಡಬಲ್ಸ್‌ ವಿಭಾಗದಲ್ಲಿ  ರೋಹನ್ ಬೋಪಣ್ಣ ಮತ್ತು ರುಮೇನಿಯಾದ ಫ್ಲೋರಿನ್ ಮಾರ್ಗಿಯಾ   ಮೊದಲ ಸುತ್ತಿನ ಹಣಾಹಣಿಯಲ್ಲಿ  6–3, 6–4 ರಿಂದ ಆಸ್ಟಿನ್ ಕ್ರಾಜಿಸೆಕ್ ಮತ್ತು ನಿಕೋಲಸ್ ಮನ್ರೊ ವಿರುದ್ಧ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT