ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷೆಲ್‌ಗೆ ಬನಾರಸ್‌ ಸೀರೆ

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ವಾರಾಣಸಿ (ಪಿಟಿಐ): ಒಬಾಮ ಅವರ ಪತ್ನಿ ಮಿಷೆಲ್‌ ಅವರಿಗೆ ಉಡುಗೊರೆಯಾಗಿ ನೀಡಲು ವಿಶೇಷ ಬನಾರಸ್ ಸೀರೆ ಸಿದ್ಧಪಡಿಸಲಾಗಿದ್ದು, ಮೂವರು ನಿಪುಣ ನೇಕಾರರು ಮೂರು ತಿಂಗಳ ಕಾಲ ಶ್ರಮಿಸಿ ಈ ಸೀರೆ ಸಿದ್ಧಪಡಿಸಿದ್ದಾರೆ. ಕೆನೆ ಬಣ್ಣದ ಸೀರೆಯಲ್ಲಿ ಚಿನ್ನದ ಹಾಗೂ ಬೆಳ್ಳಿಯ ಎಳೆಗಳನ್ನು  ಸೇರಿಸಲಾಗಿದೆ. 400 ಗ್ರಾಮ್‌ ತೂಗುವ ಈ ಸೀರೆಯ ಬೆಲೆ ₨ 1.5 ಲಕ್ಷ.

ಮಿಷೆಲ್‌ ಬನಾರಸ್‌ ಸೀರೆಯ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಒಬಾಮ ಅವರ ಆಪ್ತರಲ್ಲಿ ಒಬ್ಬರಾಗಿರುವ ಅಜಂಗಡದಲ್ಲಿ ಜನಿಸಿರುವ ಫ್ರಾಂಕ್‌ ಇಸ್ಲಾಮ್‌ ಅವರ ಪತ್ನಿ ಡೆಬ್ಬಿ ಡ್ರೆಸ್‌ಮನ್‌ ಸೀರೆಗಾಗಿ ಆರ್ಡರ್‌ ನೀಡಿದ್ದರು ಎಂದು ಸೀರೆ ವ್ಯಾಪಾರಿ ಅಬ್ದುಲ್‌ ಮಾಟಿನ್‌ ತಿಳಿಸಿದ್ದಾರೆ.

‘ವಾರಾಣಸಿಯ ವಸ್ತ್ರ ಉದ್ಯೋಗ ಸಂಘ’ ಈಗಾಗಲೇ 100 ಬನಾರಸ್‌ ಸೀರೆಗಳನ್ನು ಕೇಂದ್ರ ಜವಳಿ ಸಚಿವ ಸಂತೋಷ್‌ ಗಂಗ್ವಾರ್‌ ಅವರಿಗೆ ಕಳುಹಿಸಿದ್ದು, ಮಿಷೆಲ್‌ ಅವರಿಗೆ ಉಡುಗೊರೆ ನೀಡುವಂತೆ ಮನವಿ ಮಾಡಿಕೊಂಡಿದೆ.

ಮೋದಿಗೆ ಕಡಿಮೆ ನಿದ್ದೆ
ನವದೆಹಲಿ ವರದಿ: ಹೈದರಾಬಾದ್‌ ಹೌಸ್‌ನ ‘ಚಾಯ್‌ ಪೆ ಚರ್ಚಾ’ ಹಾಗೂ ಹುಲ್ಲುಹಾಸಿನ ನಡಿಗೆಯ ಮೇಲೆ ನಡೆದ ಮಾತುಕತೆಯ ವಿವರ ಹಂಚಿಕೊಳ್ಳುವಂತೆ ಪತ್ರಕರ್ತರು  ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದಾಗ, ಅವು ತೆರೆಮರೆಯಲ್ಲಿಯೇ ಇರಲಿ ಎಂದು ಮೋದಿ ಹೇಳಿದರು.

‘ಹೌದು, ನಾವು ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಮೋದಿ ಮಾತಿಗೆ ಒಬಾಮ ಸಹ ದನಿಗೂಡಿಸಿದರು. ನಿತ್ಯವೂ ಎಷ್ಟು ಹೊತ್ತು ನಿದ್ದೆ ಮಾಡುತ್ತೇವೆ ಎಂದು ಚರ್ಚಿಸಿದೆವು. ಮೋದಿ ಅವರು ನನಗಿಂತ ಒಂದು ಗಂಟೆ ಕಡಿಮೆ ನಿದ್ದೆ ಮಾಡುತ್ತಾರೆ ಎಂಬುದು ತಿಳಿಯಿತು. ಆರು ವರ್ಷಗಳ ನಂತರ ನಂತರ ಅವರಿಗೆ ಮತ್ತೊಂದು ಗಂಟೆ ಹೆಚ್ಚಿಗೆ ನಿದ್ದೆ ಮಾಡಲು ಅವಕಾಶ ದೊರೆಯಬಹುದು ಎಂದು ಒಬಾಮ ಹಾಸ್ಯ ಚಟಾಕಿ ಹಾರಿಸಿದರು.

ಎರಡು ದೇಶಗಳ ನಡುವಿನ ಸಂಬಂಧ ಕಾಗದದ ಮೇಲಿನ ಕಾಮಾ, ಫುಲ್‌ಸ್ಟಾಪ್‌ ಮೇಲೆ ಅವಲಂಬಿತವಾಗಿರುವುದಿಲ್ಲ. ಆದರೆ, ಉಭಯ ದೇಶಗಳ ನಾಯಕರ ನಡುವಿನ ಆತ್ಮೀಯತೆಯನ್ನು ಅವಲಂಬಿಸಿರುತ್ತದೆ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT