ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿನಲ್ಲಿ ಭಾಗೀರತಿ

Last Updated 24 ಮೇ 2012, 19:30 IST
ಅಕ್ಷರ ಗಾತ್ರ

“ಇದು `ಕೆರೆಗೆ ಹಾರ~ ಜನಪದ ಕಥನದ ಪುನರ್‌ಸೃಷ್ಟಿ ಮತ್ತು ಪುನರ್‌ವ್ಯಾಖ್ಯಾನ~”- ಎಂದು ತಮ್ಮ ಸಿನಿಮಾವನ್ನು ವಿಶ್ಲೇಷಿಸಿದರು ನಿರ್ದೇಶಕ ಬರಗೂರು ರಾಮಚಂದ್ರಪ್ಪ. ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವದ ಪ್ರೀಮಿಯರ್‌ನಲ್ಲಿ ಪ್ರದರ್ಶನಗೊಂಡ ಅವರ `ಭಾಗೀರತಿ~ ಚಿತ್ರ ಜೂನ್ ಮೊದಲ ವಾರದಲ್ಲಿ ತೆರೆಕಾಣಲಿದೆ.

ಪರ್ಯಾಯ ಚಿತ್ರವೊಂದು ವ್ಯಾಪಾರಿ ಚಿತ್ರದ ಮಾದರಿಯಲ್ಲಿ ಬಿಡುಗಡೆಯಾಗುತ್ತಿರುವುದು `ಭಾಗೀರತಿ~ಯ ವಿಶೇಷ.

ಜನಪದ ಕಥೆಯ ಮೂಲ ಆಶಯಗಳಿಗೆ ಧಕ್ಕೆ ಬಾರದಂತೆ ಸಿನಿಮಾ ರೂಪಕ್ಕೆ ಇಳಿಸಿದ್ದೇನೆ. ಇದು ಮೂಢನಂಬಿಕೆಯ ಕಥೆಯಲ್ಲ. ಹೆಣ್ಣಿನ ಜೀವನದ ಮೇಲೆ ನಡೆಯುವ ಕ್ರೌರ್ಯದ ಕಥನ ಎಂದರು ಬರಗೂರು. `ಈ ಚಿತ್ರದ ಮೂಲಕ ನನ್ನನ್ನು ನಾನು ಮೀರುವ ಪ್ರಯತ್ನ ಮಾಡಿದ್ದೇನೆ~ ಎಂದರು. `ಜನಪದ ಮತ್ತು ಜನಪರ ಎರಡೂ ಆಗಿರುವ ಚಿತ್ರ ಜನಪ್ರಿಯವೂ ಆಗಲಿ ಎಂಬ ಬಯಕೆ ಅವರದು.

ಜನಪದ ಕಥೆಯನ್ನು ಸಿನಿಮಾ ಮಾಡುವುದು ಸುಲಭವಲ್ಲ. `ಕೆರೆಗೆ ಹಾರ~ ಕೇವಲ ಐದು ಪುಟಗಳ ಕಥನಗೀತೆ. ಆದರೆ ಅದರಲ್ಲಿ ಸಿನಿಮಾಕ್ಕೆ ಬೇಕಾದ ಮೂಲ ಧಾತು ಇದೆ.

ಅದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಹೆಣೆದಿದ್ದೇನೆ. ಬೇರೆ ಕಲಾತ್ಮಕ ಚಿತ್ರಗಳಂತೆ ನಿದ್ರೆ ಬರಿಸುವ ನಿಧಾನಗತಿಯ ಶೈಲಿ ಇಲ್ಲಿಲ್ಲ. ಬದಲಾಗಿ ಜನರನ್ನು ತಲಪುವ ಜನಪ್ರಿಯ ನಿರೂಪಣಾ ಶೈಲಿಯನ್ನೇ ಬಳಸಿದ್ದೇನೆ ಎಂದರು. ವಿದ್ಯಾರ್ಥಿ ದಿನಗಳಲ್ಲಿ ಪಠ್ಯವಾಗಿ `ಕೆರೆಗೆಹಾರ~ವನ್ನು ಓದಿದ್ದ ನಟ ಕಿಶೋರ್ ಆ ಕಥೆ ಸಿನಿಮಾವಾಗಬೇಕು ಎಂಬ ಕನಸು ಬಹಳ ಹಿಂದೆಯೇ ತಮ್ಮಲ್ಲಿ ಮೊಳಕೆಯೊಡೆದಿತ್ತು ಎಂಬುದನ್ನು ಬಿಚ್ಚಿಟ್ಟರು.
 
ವಾಸ್ತವವಾಗಿ ತಮ್ಮ ಪಾತ್ರವನ್ನು ಕುಮಾರ್ ಗೋವಿಂದು ನಿರ್ವಹಿಸಬೇಕಿತ್ತು. ಆದರೆ ಅವರೇ ನನ್ನ ಹೆಸರು ಸೂಚಿಸಿ ದೊಡ್ಡತನ ಮೆರೆದರು ಎಂದು ಸ್ಮರಿಸಿದರು. ಇದು ಒಂದು ಕಾಲಮಾನಕ್ಕೆ ಸೀಮಿತವಾಗದೆ, ಎಂದೆಂದಿಗೂ ಪ್ರಸ್ತುತವಾಗುವ ಕಥೆ.

ಪಾತ್ರ ನಿರ್ವಹಣೆಯಲ್ಲಿ ನಾನೂ ಕಷ್ಟಪಟ್ಟೆ, ಬರಗೂರು ಅವರಿಗೂ ಕಷ್ಟಕೊಟ್ಟೆ ಎಂದು ಕಿಶೋರ್ ನಗೆ ಚಿಮ್ಮಿಸಿದರು.ಪಾತ್ರವನ್ನು ನಾವು ಅಭಿನಯಿಸುವುದಕ್ಕಿಂತ ಅದನ್ನು ಅನುಭವಿಸಿದರೆ ಒಳಗಿನ ಭಾವಗಳು ತಾನಾಗಿಯೇ ಹೊರಬರುತ್ತದೆ. ಈ ರೀತಿ ಅನುಭವಿಸುವುದಕ್ಕೆ `ಭಾಗೀರತಿ~ ಅವಕಾಶ ಮಾಡಿಕೊಟ್ಟಿದೆ. ಬರಗೂರು ಮೇಷ್ಟ್ರು ತಮ್ಮದೇ ಶೈಲಿಯಲ್ಲಿ, ಜನರಿಗೆ ಹಿಡಿಸುವ ರೀತಿಯಲ್ಲಿ ಚಿತ್ರ ಮಾಡಿದ್ದಾರೆ ಎಂದರು ನಟ ಶ್ರೀನಾಥ್.

ಕಲಾತ್ಮಕ ಚಿತ್ರ- ವ್ಯಾಪಾರಿ ಚಿತ್ರ ಎಂಬ ವಿಂಗಡಣೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ನಿರ್ಮಾಪಕರ ಬಿ.ಕೆ.ಶ್ರೀನಿವಾಸ್ ಅವರದು. ವ್ಯಾಪಾರಿ ಚಿತ್ರಗಳಂತೆಯೇ `ಭಾಗೀರತಿ~ಗೂ ಪ್ರಚಾರ ಮಾಡಲಾಗುವುದು. 40-50 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

ಛಾಯಾಗ್ರಾಹಕ ಹರೀಶ್ ಸೊಂಡೆಕೊಪ್ಪ, ಸಂಕಲನಕಾರ ಸುರೇಶ್ ಅರಸ್ ಹಾಜರಿದ್ದರು.
`ಪ್ರಚಾರಕ್ಕೆ ಕೈ ಕೊಟ್ಟರು~

`ಅಲೆಮಾರಿ~ ಚಿತ್ರದಿಂದ ಲಾಭವೂ ಆಗಿಲ್ಲ ನಷ್ಟವೂ ಆಗಿಲ್ಲ~- ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಮಾತಿನಲ್ಲಿ ನೋವಿತ್ತು. ಅವರ ಬೇಸರಕ್ಕೆ ಕಾರಣ ನಾಯಕ ಯೋಗೀಶ್ ಮತ್ತು ನಾಯಕಿ ರಾಧಿಕಾ ಪಂಡಿತ್ ಚಿತ್ರದ ಪ್ರಚಾರಕ್ಕೆ ಬಾರದಿರುವುದು. ಚಿತ್ರ ಚೆನ್ನಾಗಿತ್ತು. ಚೆನ್ನಾಗಿಯೇ ಓಡಿತು. ಆದರೆ ಲಾಭ ಗಳಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರೂ ಪ್ರಚಾರಕ್ಕೆ ಬಂದಿದ್ದರೆ ದೊಡ್ಡ ಯಶಸ್ಸು ಕಾಣಲು ಸಾಧ್ಯವಾಗುತ್ತಿತ್ತು.

ಅದರಲ್ಲಿ ನನ್ನದೂ ತಪ್ಪಿದೆ. ಅವರ ಬಳಿ ನಾನು ನೇರವಾಗಿ ಮಾತನಾಡಲಿಲ್ಲ. ಆದರೆ ಚಿತ್ರ ಮಾಡಿದ ಬಳಿಕ ಅವರು ತಾವಾಗಿಯೇ ಪ್ರಚಾರ ಕಾರ್ಯಕ್ಕೆ ನಮ್ಮಂದಿಗೆ ಕೈಜೋಡಿಸಬೇಕು. ಸಂಭಾವನೆ ವಿಚಾರದಲ್ಲಿ ಅವರಿಗೆ ಎಲ್ಲೂ ಸಮಸ್ಯೆಯಾಗಿಲ್ಲ. ಮೊದಲ ಹಂತದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಸಂಪೂರ್ಣ ಸಂಭಾವನೆ ಪಾವತಿ ಮಾಡಿದ್ದೆ.
 
ಹಲವು ಚಿತ್ರಗಳಿಗೆ ಅವರು ಒಪ್ಪಿಕೊಂಡಿರುತ್ತಾರೆ, ನಿಜ. ಆದರೆ ಬಿಡುವು ಮಾಡಿಕೊಂಡು ಪ್ರಚಾರಕ್ಕೆ ಬರಬೇಕೆನ್ನುವುದು ಅವರ ಮನಸ್ಸಿನಲ್ಲಿ ಬರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT