ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮೃಗಾಲಯಕ್ಕೆ ಹಂಬೋಲ್ಟ್‌ ಪೆಂಗ್ವಿನ್‌

ಭಾರತದಲ್ಲಿ ಮೊದಲ ಬಾರಿಗೆ ಕಡಲಹಕ್ಕಿ
Last Updated 26 ಜುಲೈ 2016, 19:39 IST
ಅಕ್ಷರ ಗಾತ್ರ

ಮುಂಬೈ: ಪೆಂಗ್ವಿನ್‌ಗಳನ್ನು ಟಿ.ವಿ., ಚಿತ್ರಗಳಲ್ಲಿ ಮಾತ್ರ ನೋಡಿರುವವರು ಅವುಗಳನ್ನು ನೇರವಾಗಿ ಹತ್ತಿರದಿಂದ ವೀಕ್ಷಿಸುವ ಅವಕಾಶ ಸನ್ನಿಹಿತವಾಗುತ್ತಿದೆ.

ಇದೇ ಮೊದಲ ಬಾರಿಗೆ ಭಾರತದ ಮೃಗಾಲಯದಲ್ಲಿ ಪೆಂಗ್ವಿನ್‌ಗಳು ಕಾಣಿಸಿಕೊಳ್ಳಲಿವೆ. ದಕ್ಷಿಣ ಮುಂಬೈನ ಬೈಕುಲ್ಲಾದಲ್ಲಿನ ವೀರ್‌ ಮಾತಾ ಜೀಜಾಬಾಯಿ ಭೋಸಲೆ ಉದ್ಯಾನದಲ್ಲಿ (ರಾಣಿಬಾಗ್‌ ಮೃಗಾಲಯ) ಹಂಬೋಲ್ಟ್‌ ಪೆಂಗ್ವಿನ್‌ಗಳು ಶೀಘ್ರದಲ್ಲಿಯೇ ವೀಕ್ಷಣೆಗೆ ಲಭ್ಯವಾಗಲಿವೆ. ದಕ್ಷಿಣ ಆಫ್ರಿಕಾದಿಂದ ಮೂರು ಗಂಡು, ಮೂರು ಹೆಣ್ಣು ಮತ್ತು ಇನ್ನೆರಡು ಹೆಣ್ಣು ಮರಿ ಹಂಬೋಲ್ಟ್‌ ಪೆಂಗ್ವಿನ್‌ಗಳನ್ನು ತರಿಸಿಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು ₹2.57 ಕೋಟಿ ವ್ಯಯಿಸಲಾಗಿದೆ.

ಪೆಂಗ್ವಿನ್‌ಗಳಿಗೆಂದೇ ವಿಶೇಷವಾಗಿ ಸ್ಥಳವನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ಇವುಗಳನ್ನು ನೋಡಲು ಇನ್ನೂ ಇನ್ನೂ ಮೂರು ತಿಂಗಳು ಕಾಯಬೇಕು.

ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಪಡೆದ ಬಳಿಕ ಬೃಹತ್ ಮುಂಬೈ ಮಹಾನಗರ ಪಾಲಿಕೆ ಈ ಪೆಂಗ್ವಿನ್‌ಗಳನ್ನು ತರಿಸಿಕೊಳ್ಳಲಾಗಿದೆ.
ಪರಿಶೋಧಕ ಅಲೆಕ್ಸಾಂಡರ್‌ ವೊನ್‌ ಹಂಬೋಲ್ಟ್‌ನ ನೆನಪಿನಲ್ಲಿ ಈ ಪ್ರಭೇದದ ಪೆಂಗ್ವಿನ್‌ಗಳಿಗೆ ಹಂಬೋಲ್ಟ್‌ ಹೆಸರು ಇರಿಸಲಾಗಿದೆ.

ಹಂಬೋಲ್ಟ್‌ ಪೆಂಗ್ವಿನ್‌ಗಳ ಮೂಲ ದಕ್ಷಿಣ ಅಮೆರಿಕ. ಚಿಲಿ ಮತ್ತು ಪೆರು ದೇಶಗಳ ಕರಾವಳಿ ತೀರದಲ್ಲಿ ಇವು ವಂಶಾಭಿವೃದ್ಧಿ ಮಾಡುತ್ತವೆ.
ಮಧ್ಯಮ ಗಾತ್ರದ ಪಕ್ಷಿಗಳಾದ ಇವು 56–70 ಸೆಂ.ಮೀ.ವರೆಗೆ ಬೆಳೆಯಬಲ್ಲವು. ಇವುಗಳ ಸರಾಸರಿ ತೂಕ 3.6–5.9 ಕೆ.ಜಿ.

ಆಕ್ಷೇಪ: ಪೆಂಗ್ವಿನ್‌ಗಳನ್ನು ಆಮದು ಮಾಡಿಕೊಳ್ಳುವುದರ ವಿರುದ್ಧ ಪ್ರಾಣಿ ಪ್ರಿಯರು ಕೆಲ ದಿನಗಳ ಹಿಂದೆ ಮೃಗಾಲಯದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಮೃಗಾಲಯವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದಿರುವಾಗ ವಿದೇಶದಿಂದ ಪ್ರಾಣಿಗಳನ್ನು ತರಿಸುವುದು ಸರಿಯಲ್ಲ ಎಂದು ಪೀಪಲ್ ಫಾರ್ ಅನಿಮಲ್‌ (ಪಿಎಫ್‌ಎ),ಕಲೆಪೆಟಾ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದ್ದವು.

‘ನಮ್ಮ ಬಳಿ ಇರುವ ಪ್ರಾಣಿಗಳನ್ನೇ ಸರಿಯಾಗಿ ನೋಡಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇನ್ನು ಪೆಂಗ್ವಿನ್‌ಗಳನ್ನು ನೋಡಿಕೊಳ್ಳಲು ಅಗತ್ಯ ಸೌಲಭ್ಯಗಳನ್ನು ನಾವು ಹೊಂದಿದ್ದೇವೆಯೇ’ ಎಂದು ಪ್ರತಿ ಭಟನೆಯ ನೇತೃತ್ವ ವಹಿಸಿದ್ದ ಆನಂದ್‌ ಶಿವ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT