ಮುಂಬೈ(ಪಿಟಿಐ): ಇಲ್ಲಿನ ಜನರ ಬಹು ನಿರೀಕ್ಷೆಯ ಮೊದಲ ಮೆಟ್ರೋ ರೈಲು ಸಂಚಾರಕ್ಕೆ ಭಾನುವಾರ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಚಾಲನೆ ನೀಡಿದರು.
ಚವ್ಹಾಣ್ ಹಾಗೂ ಎಡಿಎಜಿಯ ಮುಖ್ಯಸ್ಥ ಅನಿಲ್ ಅಂಬಾನಿ ಅವರು ಬೆಳಿಗ್ಗೆ 10.10ಕ್ಕೆ ನೂತನ ರೈಲು ಸೇವೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಚವ್ಹಾಣ್ ಅವರು, ಮೆಟ್ರೋ ರೈಲು ಸೇವೆ ಮುಂಬೈ ನಗರದ ಜನರಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟು ಮಾಡಲಿದೆ ಎಂದರು.
ನೂತನ ಮೆಟ್ರೋ ರೈಲು ವರ್ಸೋವಾ–ಘಾಟ್ಕೋಪರ್ ಮಧ್ಯೆ 11.4 ಕಿ.ಮೀ. ದೂರ ಸಂಚರಿಸಲಿದ್ದು, ಪ್ರಯಾಣಕ್ಕೆ 20 ನಿಮಿಷ ಕಾಲಾವಕಾಶ ತೆಗೆದುಕೊಳ್ಳಲಿದೆ. ಇದೇ ದೂರವನ್ನು ರಸ್ತೆ ಮಾರ್ಗದ ಮೂಲಕ ಕ್ರಮಿಸಲು 90 ನಿಮಿಷ ಬೇಕು.