ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಸ್ವಂತ ಮನೆ ಕನಸು ಸಾಕಾರ

ಜಾತಿ ಪ್ರಮಾಣಪತ್ರ ಪಡೆಯದಿರಲು ಬಿಎಂಸಿ ಠರಾವು
Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಐಎಎನ್‌ಎಸ್‌): ಜಾತಿ, ಧರ್ಮ ಮತ್ತು ಆಹಾರ ಪದ್ಧತಿಯ ಕಾರಣ ಸುಮಾರು ಎರಡು ದಶಕ­ಗ­ಳಿಂದ ತಮ್ಮ ಕನಸಿನ ಮನೆ ಪಡೆ­ಯು­ವುದರಿಂದ ವಂಚಿತರಾದ ಸಮು­ದಾಯ­ಗಳ ಬಾಳಿನಲ್ಲಿ ಹೊಸ ಆಶಾಕಿರಣ ಮೂಡಿದೆ.

ಈ ಸಮುದಾಯದವರು ಮನೆ ಖರೀದಿ ಮಾಡಲು ಅಥವಾ ಬಾಡಿಗೆ ಪಡೆ­ಯಲು ಅಡ್ಡಿಯಾಗಿದ್ದ ಗೃಹ ನಿರ್ಮಾಣ ಸಂಘ ಮತ್ತು ಮನೆಗಳ ಮಾಲೀಕರಿಗೆ ವೃತ್ತಿ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ಹಿಂದಕ್ಕೆ ಪಡೆ­ಯುವ ಕುರಿತು ಬೃಹತ್‌ ಮುಂಬೈ ಮಹಾ­ನಗರ ಪಾಲಿಕೆ (ಬಿಎಂಸಿ) ಶುಕ್ರವಾರ ಠರಾವು ಪಾಸು ಮಾಡಿದೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಾಲಿಕೆ ಸದಸ್ಯ ಸಂದೀಪ್‌ ದೇಶಪಾಂಡೆ ಪಾಲಿಕೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲ ಪಕ್ಷದ ಸದಸ್ಯರು ಬೆಂಬಲ ಸೂಚಿಸಿದರು.

ಗುಜರಾತಿ ಮತ್ತು ರಾಜಸ್ತಾನಿ­ಗಳನ್ನು ಹೊರತುಪಡಿಸಿ ಮರಾಠಿಗರು, ದಕ್ಷಿಣ ಹಾಗೂ ಉತ್ತರ ಭಾರತೀಯರು ಸಾಂಪ್ರದಾಯಿಕ ಮಾಂಸಾಹಾರ ಸೇವಿ­ಸು­­ವವರ ಎನ್ನುವ ಕಾರಣಕ್ಕೆ ದಶಕದಿಂದ ಅವರು ಮಹಾನಗರ ಪಾಲಿಕೆ ವ್ಯಾಪ್ತಿ­ಯಲ್ಲಿ ಮನೆ ಖರೀದಿ ಅಥವಾ ಬಾಡಿಗೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT