ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜಫ್ಫರ್‌ನಗರ ಗಲಭೆ: ಕೋರ್ಟ್‌ಗೆ ಆರೋಪಪಟ್ಟಿ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಜಫ್ಫರ್‌ನಗರ (ಪಿಟಿಐ): ಕಳೆದ ವರ್ಷ ಮುಜಫ್ಫರ್‌ನಗರ  ಕೋಮು­ಗಲಭೆ ಸಂದರ್ಭದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಖ್ಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಶನಿವಾರ ಆರೋಪಪಟ್ಟಿ ಸಲ್ಲಿಸಿದೆ.

ಮುಜಫ್ಫರ್‌ನಗರ ಜಿಲ್ಲೆಯ ಫುಗನ ಗ್ರಾಮದ ವೇದಪಾಲ್‌ ಮತ್ತು ಇತರ ನಾಲ್ವರ ವಿರುದ್ಧ ಈ ಪ್ರಕರಣ ದಾಖಲಾಗಿದೆ. ಸಚಿನ್, ಸನ್ನಿ, ಅಜಿತ್‌ ಮತ್ತು ಯೋಗೇಶ್‌ ಅವರು ತಲೆಮರೆಸಿ­ಕೊಂಡಿದ್ದಾರೆ.

ಕೋಮುಗಲಭೆ ಸಂದರ್ಭದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಕುರಿತು ಆರು ಪ್ರಕರಣಗಳು ದಾಖಲಾಗಿದ್ದವು. ಆದರೆ,  ಒಂದು ಪ್ರಕರಣದಲ್ಲಿ ದೂರುದಾರರು ಪ್ರತಿ­ಕೂಲ ಹೇಳಿಕೆ ನೀಡಿದ ಕಾರಣ ಆ  ಪ್ರಕರಣವನ್ನು ಪೊಲೀಸರು ಮುಕ್ತಾಯ ಮಾಡಿದ್ದಾರೆ.

ಸದ್ಯ ಐದು ಪ್ರಕರಣ­ಗಳಲ್ಲಿ 22 ಆರೋಪಿಗಳ ವಿರುದ್ಧ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಇವರಲ್ಲಿ 20 ಮಂದಿ ನಾಪತ್ತೆ­ಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT