ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜಾಫರ್‌ನಗರ ಸಾಮೂಹಿಕ ಅತ್ಯಾಚಾರ

376(2)ಜಿ ಕಲಂನಡಿ ಪ್ರಕರಣ ದಾಖಲು
Last Updated 28 ಅಕ್ಟೋಬರ್ 2014, 10:40 IST
ಅಕ್ಷರ ಗಾತ್ರ

ಮುಜಫ್ಫರ್ ನಗರ (ಪಿಟಿಐ): ಮುಜಾಫರ್‌ನಗರ ಕೋಮುಗಲಭೆ ಸಂದರ್ಭದಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ 25 ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಐಪಿಸಿ 376(2) ಜಿ ಕಲಂ ಅಡಿಯಲ್ಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೋಮು ಗಲಭೆ ಅಥವಾ ಮತೀಯ ಗಲಭೆಯ ಸಂದರ್ಭದಲ್ಲಿ ನಡೆಯುವ ಸಾಮೂಹಿಕ ಅತ್ಯಾಚಾರ ಪ್ರಕರಣ ಈ  ಕಲಂನಡಿ ಬರುತ್ತದೆ ಎಂದು ತನಿಖಾಧಿಕಾರಿ ಮಾಲಾ ಯಾದವ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷ ಮುಜಾಫರ್‌ನಗರ ಕೋಮುಗಲಭೆ ಸಂದರ್ಭದಲ್ಲಿ ಒಟ್ಟು ಏಳು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ನಡೆದಿದ್ದವು. ಈ ಪ್ರಕರಣದ ಆರೋಪಿಗಳ ವಿರುದ್ಧ ಸ್ಥಳೀಯ ಪೋಲಿಸರು  ಐಪಿಸಿ 376 (ಡಿ) ಕಲಂನಡಿ ಮಾತ್ರ ಪ್ರಕರಣ ದಾಖಲಿಸಿದ್ದರು.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಫುಗಾನಾದಲ್ಲಿ ದಾಖಲಾದ  ಒಂದು ಪ್ರಕರಣವನ್ನು ಕೈಬಿಡಲಾಗಿದೆ. 25 ಆರೋಪಿಗಳ ಪೈಕಿ 18 ಜನರನ್ನು ಬಂಧಿಸಲಾಗಿದ್ದು ಉಳಿದ ಏಳು ಮಂದಿ ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT