ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ನೀರಸ: ಹಾಲು ಮಾರಾಟ ಆಬಾಧಿತ

Last Updated 30 ಆಗಸ್ಟ್ 2014, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕೆಳಗಿನ ಎಲ್ಲಾ ಒಕ್ಕೂಟ­ಗಳಿಗೆ ಹಾಲು ಮಾರಾಟ ಗಾರರಲ್ಲಿ ಒಬ್ಬರನ್ನು ನಿರ್ದೇಶಕ ರನ್ನಾಗಿ ನೇಮಕ ಮಾಡುವಂತೆ ಒತ್ತಾಯಿಸಿ ನಂದಿನಿ ಹಾಲು ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘವು ಕರೆ ಕೊಟ್ಟಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಗರ ದಲ್ಲಿ ಶನಿವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಾಲು ಮಾರಾಟ ದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

ನಗರ ವ್ಯಾಪ್ತಿಯಲ್ಲಿರುವ   ನಂದಿನಿ ಹಾಲು ಮಾರಾಟಗಾರರು ಮುಷ್ಕ ರವನ್ನು ಬೆಂಬಲಿಸದೆ ಪ್ರತಿ ನಿತ್ಯದಂತೆ ಹಾಲು ಹಾಗೂ ಹಾಲಿನ ಉತ್ಪನ್ನ ಗಳನ್ನು ಮಾರಾಟ ಮಾಡಿದರು.

‘ಮಂಡಳಿಯ ಸಿಬ್ಬಂದಿ ಹಾಗೂ ವಾಹನಗಳನ್ನೇ ಬಳಸಿಕೊಂಡು ಹಲ ವೆಡೆ ಹಾಲು ವಹಿವಾಟು ನಡೆಸ ಲಾ­ಯಿತು’ ಎಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬಮೂಲ್‌) ಅಧ್ಯಕ್ಷ ಆರ್‌.ಕೆ.­ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಗರದಲ್ಲಿ ಸುಮಾರು 1,580 ಮಂದಿ ಏಜೆಂಟರಿದ್ದಾರೆ. ಅವರಲ್ಲಿ 1,550 ಏಜೆಂಟರು ಪ್ರತಿನಿತ್ಯದಂತೆ ಭಾನುವಾರದ ವಹಿವಾಟಿಗೆ ಮುಂಗಡ ಬೇಡಿಕೆ ಸಲ್ಲಿಸಿದ್ದಾರೆ.

ಕೇವಲ 30 ಏಜೆಂಟರು ಮಾತ್ರ ಮುಷ್ಕ­ರದ ಪರಿಣಾಮವನ್ನು ನೋಡಿ­ಕೊಂಡು ಭಾನುವಾರ ಬೆಳಿಗ್ಗೆ ಬೇಡಿಕೆ ಸಲ್ಲಿಸು ವುದಾಗಿ ತಿಳಿಸಿದ್ದಾರೆ. ಮುಷ್ಕ­ರಕ್ಕೆ ಕರೆ ಕೊಟ್ಟಿದ್ದ ಸಂಘದ ಸದಸ್ಯ­ರೊಂದಿಗೆ ಸಂಜೆ ಮಾತುಕತೆ ನಡೆಸಲಾ­ಗಿದ್ದು, ಅವರು ಮುಷ್ಕರ ನಿಲ್ಲಿಸಲು ಒಪ್ಪಿದ್ದಾರೆ’ ಎಂದು ಹೇಳಿದರು.

‘ಸಾರ್ವಜನಿಕರಿಗೆ ಮತ್ತು ಹಾಲು ಉತ್ಪಾದಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಆದ ಕಾರಣ ಬಹುತೇಕ ಏಜೆಂಟರು ಮುಷ್ಕರವನ್ನು ಬೆಂಬ ಲಿಸದೆ ಪ್ರತಿನಿತ್ಯದಂತೆ ವಹಿವಾಟು ನಡೆಸಿದರು’ ಎಂದು ಬೆಂಗಳೂರು ಡೇರಿ ಏಜೆಂಟರ ಸಂಘದ ಅಧ್ಯಕ್ಷ ಎಚ್‌.ಎಸ್‌. ರಂಗಸ್ವಾಮಿ ತಿಳಿಸಿದ್ದಾರೆ. ಮಾರಾಟ ಪರವಾನಗಿ ಮತ್ತು ವ್ಯಾಟ್‌ಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಒಕ್ಕೂಟವೇ ಭರಿಸಬೇಕು. ಹಾಲು ಮಾರಾಟಗಾರರು ನಂದಿನಿ ಹಾಲು ಮಾರಾಟಗಾರರ ಕ್ಷೇಮಾ ಭಿವೃದ್ಧಿ ಸಂಘದ ಇತರೆ ಬೇಡಿಕೆ ಗಳಾಗಿವೆ. ಅವುಗಳನ್ನು ಈಡೇರಿಸ ದಿದ್ದರೆ ಶನಿವಾರದಿಂದ (ಆ.30) ನಗರ ವ್ಯಾಪ್ತಿಯಲ್ಲಿ ಹಾಲು ಮಾರಾಟ ಸ್ಥಗಿತಗೊಳಿಸಿ ಅನಿರ್ದಿ ಷ್ಟಾವಧಿ ಮುಷ್ಕರ ನಡೆಸುವುದಾಗಿ ಆ ಸಂಘದ ಸದಸ್ಯರು ಹೇಳಿದ್ದರು.

ಆದರೆ, ಕೆಲವೇ ಸದಸ್ಯರು ಹೊಸೂರು ರಸ್ತೆಯ ಕೆಎಂಎಫ್‌ ಪ್ರಧಾನ ಕಚೇರಿ ಆವರಣದಲ್ಲಿನ ಬಮೂಲ್‌ ಕಚೇರಿ ಎದುರು  ಪ್ರತಿಭಟನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT