ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಸುತ್ತಿಗೆ ಫೆಡರರ್, ಮರ್ರೆ

ಟೆನಿಸ್ : ಸ್ಟಾನಿಸ್ಲಾಸ್‌ ವಾವ್ರಿಂಕಗೆ ಮುನ್ನಡೆ: ಟೂರ್ನಿಯಿಂದ ಹೊರಬಿದ್ದ ಲೇಟನ್‌ ಹೆವಿಟ್‌
Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಎಎಫ್‌ಪಿ):  ಐದು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಗುರುವಾರ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ಪ್ರವೇಶಿಸಿದರು.  ಅನುಭವಿ ಆಟಗಾರ ಲಿಟನ್ ಹೆವಿಟ್ ಸೋತು ನಿರ್ಗಮಿಸಿದರು.

ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟ ಗಾರ ರೋಜರ್ ಫೆಡರರ್ 6–1, 6–2, 6–1ರಿಂದ ಬೆಲ್ಜಿಯಂನ ಸ್ಟೀವ್ ಡಾರ್ಸಿಸ್ ವಿರುದ್ಧ ಜಯಗಳಿಸಿದರು. 80 ನಿಮಿಷಗಳವರೆಗೆ ನಡೆದ ಪಂದ್ಯ ದಲ್ಲಿ ಫೆಡರರ್ ತಾಳ್ಮೆಯಿಂದ ತಮ್ಮ ಎದು ರಾಳಿಯನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ ಒಂದು ಗೇಮ್ ಸೋತ ಅವರು ಎರಡನೇ ಸುತ್ತಿನಲ್ಲಿ ಎರಡು ಗೇಮ್‌ ಗಳಲ್ಲಿ ಆಘಾತ ಅನುಭವಿಸಿದರು. ಆದರೆ, ತಮ್ಮ ಮನಮೋಹಕ ಬ್ಯಾಕ್‌ಹ್ಯಾಂಡ್ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.  ಲಯ ಕಳೆದುಕೊಂಡ ಬೆಲ್ಜಿಯಂ ಆಟಗಾರ  ಫೆಡರರ್‌ಗೆ ಶರಣಾದರು. 17 ಗ್ರಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಸ್ವಿಸ್ ಆಟಗಾರ ರೋಜರ್ ಮೂರನೇ ಸುತ್ತಿನಲ್ಲಿ ಜರ್ಮನಿಯ 29ನೆ ಶ್ರೇಯಾಂಕದ ಫಿಲಿಪ್ ಕೊಶ್ರೀಬರ್ ವಿರುದ್ಧ ಆಡುವರು.

ಮರ್ರೆಗೆ ಪ್ರಯಾಸದ ಗೆಲುವು: ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ 5–7, 4–6, 6–1, 6–3, 6–1ರಿಂದ ಫ್ರಾನ್ಸ್‌ ಆಟಗಾರ ಆಡ್ರಿಯನ್ ಮನ್ನಾರಿನೊ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು.ಪಂದ್ಯದಲ್ಲಿ ಅರಂಭದಿಂದಲೂ ಮರ್ರೆ ಸೋಲಿನ ಭೀತಿ ಎದುರಿಸಿದರು.  ಸುಂದರ ಆಟವಾಡಿದ ಮನ್ನಾರಿನೋ 2012ರ ಚಾಂಪಿಯನ್ ಮರ್ರೆಯ ವಿರುದ್ಧ ಮೊದಲ ಎರಡು ಸೆಟ್‌ಗಳನ್ನು ಗೆದ್ದರು.  ನಂತರ ತಿರುಗೇಟು ನೀಡಿದ ಮರ್ರೆ 16ರ ಘಟ್ಟಕ್ಕೆ ಪ್ರವೇಶಿಸಿದರು. ಮುಂದಿನ ಪಂದ್ಯದಲ್ಲಿ ಅವರು 30ನೇ ಶ್ರೇಯಾಂಕದ ಬ್ರೆಜಿಲ್‌ನ ಥಾಮಸ್ ಬೆಲ್ಲುಸ್ಸಿ ಅವರನ್ನು ಎದುರಿಸುವರು.

ಹೆವಿಟ್ ನಿರ್ಗಮನ: 2001ರ ಚಾಂಪಿ ಯನ್  ಆಸ್ಟ್ರೇಲಿಯಾದ ಲಿಟನ್ ಹೆವಿಟ್ 3–6, 2–6, 6–3,7–5, 5–7ರಿಂದ ತಮ್ಮ ದೇಶದವರೇ ಆದ ಬರ್ನಾರ್ಡ್ ಟಾಮಿಕ್ ವಿರುದ್ಧ ಪರಾಭವಗೊಂಡರು. ಹೆವಿಟ್ ಆಡುತ್ತಿರುವ ಕೊನೆಯ ಅಮೆರಿಕ  ಓಪನ್ ಟೂರ್ನಿ ಇದು. ಮುಂದಿನ ಆಸ್ಟ್ರೇಲಿಯಾ ಓಪನ್ ಟೂರ್ನಿಯ ನಂತರ ಅವರು ವೃತ್ತಿಪರ ಟೆನಿಸ್‌ನಿಂದ ನಿವೃತ್ತರಾಗಲಿದ್ದಾರೆ.

ವಾವ್ರಿಂಕ ಮುನ್ನಡೆ: ಸ್ವಿಟ್ಜರ್‌ಲೆಂಡ್ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕ ಕೂಡ ಟೂರ್ನಿಯ ಮೂರನೇ ಸುತ್ತಿಗೆ ರಹದಾರಿ ಪಡೆದರು. ಐದನೇ ಶ್ರೇಯಾಂಕದ ವಾವ್ರಿಂಕ7-6 (7), 7-6 (7), 7-6 (8) ರಿಂದ ದಕ್ಷಿಣ ಕೊರಿಯಾದ ಉದಯೋನ್ಮುಖ ಆಟಗಾರ  ಹಯೆನ್ ಚುಂಗ್ ವಿರುದ್ಧ ಜಯಿಸಲು ಬಹಳಷ್ಟು  ಬೆವರು ಹರಿಸ ಬೇಕಾಯಿತು. ಇನ್ನೊಂದು ಪಂದ್ಯದಲ್ಲಿ ಜೆಕ್ ಗಣರಾಜ್ಯದ ಬರ್ಡಿಕ್ ಆಸ್ಟ್ರೀಯಾದ ಜರ್ಗನ್ ಮಾಲ್ಜರ್ ವಿರುದ್ಧ 7-6 (7), 6-1, 6-3ರಿಂದ ಗೆದ್ದರು. 

ಮುಗುರುಜಾಗೆ ಸೋಲು: ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪೇನ್ ಗಾರ್ಬಿಯಾ ಮುಗುರುಜಾ ಆಘಾತ ಅನುಭವಿಸಿದರು. ದ್ಚಿತೀಯ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಜೊಹನ್ನಾ ಕೊಂಥಾ 6–7 (4), 7–6 (4), 2–6ರಿಂದ ಮುಗುರುಜಾ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT