ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕಡೆ ಸರ ದೋಚಿದ ದುಷ್ಕರ್ಮಿಗಳು

Last Updated 23 ಮೇ 2015, 20:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ನಡೆದ ಮೂರು  ಪ್ರತ್ಯೇಕ ಪ್ರಕರಣಗಳಲ್ಲಿ, ದುಷ್ಕರ್ಮಿಗಳು ಕೋರಮಂಗಲ ಮತ್ತು ಎಚ್‌ಎಸ್ಆರ್‌ ಲೇಔಟ್‌ನಲ್ಲಿ ಮೂವರು ಮಹಿಳೆಯರ ಚಿನ್ನದ ಸರಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕೋರಮಂಗಲ ಸಮೀಪದ ಜಕ್ಕ ಸಂದ್ರದ ನಿವಾಸಿ ಕಸ್ತೂರಿ ಎಂಬುವವರು ಬೆಳಿಗ್ಗೆ 6 ಗಂಟೆಗೆ ತಮ್ಮ ಮನೆಯ ಮುಂದೆ ನಿಂತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕ ರ್ಮಿಗಳು, ಅವರ ಕೊರಳಲ್ಲಿದ್ದ ₹ 75 ಸಾವಿರ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕಸ್ತೂರಿ ಅವರ ಕೂಗು ಕೇಳಿ ಜನ ನೆರವಿಗೆ ಧಾವಿಸುವ ಹೊತ್ತಿಗಾಗಲೇ, ದುಷ್ಕರ್ಮಿಗಳು ಬೈಕ್ ಮೂಲಕ ಸ್ಥಳ ದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೆರಡು ಘಟನೆ: ಎಚ್‌ಎಸ್‌ಆರ್‌ ಲೇಔಟ್‌ ಎರಡನೇ ಸೆಕ್ಟರ್‌ನಲ್ಲಿ ಶುಭಲಕ್ಷ್ಮಿ ಎಂಬುವವರ ಸರ ದೋಚಲಾಗಿದೆ. ಬೆಳಿಗ್ಗೆ 7.30ರ ಸುಮಾರಿಗೆ ಶುಭ ಅವರು ತಮ್ಮ ಮನೆಯ ಮುಂಭಾಗವನ್ನು ಸ್ವಚ್ಛಗೊಳಿಸುತ್ತಿದರು. ಈ ವೇಳೆ ಬೈಕ್‌ನಲ್ಲಿ ಸ್ಥಳಕ್ಕೆ ಬಂದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ಶುಭ ಅವರ ಗಮನವನ್ನು ಬೇರಡೆಗೆ ಸೆಳೆದು 40 ಗ್ರಾಂ ಚಿನ್ನದ ಸರ ದೋಚಿದ್ದಾರೆ.

ಈ ಘಟನೆ ನಡೆದ ಹದಿನೈದು ನಿಮಿಷದ ಅಂತರದಲ್ಲಿ, ಎಚ್‌ಎಸ್‌ಆರ್‌ ಲೇಔಟ್‌ ಮೂರನೇ ಸೆಕ್ಟರ್‌ನಲ್ಲಿ ಸರಸ್ವತಿ ಎಂಬುವವರ ಸರವನ್ನು ಸಹ ಅಪಹರಿ ಸಲಾಗಿದೆ. ಬೆಳಿಗ್ಗೆ  7.45ರ ಸುಮಾರಿಗೆ ಸರಸ್ವತಿ ಅವರು ಮನೆಯ ಮುಂಭಾಗ ಕೆಲಸ ಮಾಡುತ್ತಿದ್ದಾಗ ಅವರ ಬಳಿ ವಿಳಾಸ ಕೇಳಿರುವ ದುಷ್ಕರ್ಮಿಗಳು, ಗಮನವನ್ನು ಬೇರೆಡೆ ಸೆಳೆದು 50 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾರೆ‌ಎಂದು ಪೊಲೀಸರು ತಿಳಿಸಿದರು. ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರಿಂದಲೇ ಎರಡು ಕಡೆ ಕೃತ್ಯ: ‘ಸರ ದೋಚಿರುವ ಮೂರು ಪ್ರಕರಣಗಳ ಪೈಕಿ, ಎರಡು ಕೇವಲ ಹದಿನೈದು ನಿಮಿ ಷದ ಅಂತರದಲ್ಲಿ ಒಂದೇ ರೀತಿ ನಡೆ ದಿವೆ. ಹಾಗಾಗಿ ಈ ಎರಡು ಕೃತ್ಯಗಳನ್ನು ಇಬ್ಬರೇ ಎಸಗಿದ್ದಾರೆ  ಎಂಬ ಅನುಮಾ ನವಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾ ಚರಣೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT