ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ರೈಲಿಗೆ ಹೆಚ್ಚುವರಿ ಬೋಗಿ

Last Updated 31 ಮಾರ್ಚ್ 2015, 20:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೇಸಿಗೆ ರಜೆ ಕಾಲದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವುದಕ್ಕಾಗಿ ಮೂರು ರೈಲುಗಳಿಗೆ ತಲಾ ಒಂದೊಂದು ಹೆಚ್ಚುವರಿ ತ್ರಿ–ಟೈರ್‌ ಎಸಿ ಬೋಗಿಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಯಶವಂತಪುರದಿಂದ ಕೋರ್ಬಾಗೆ ವಾರದಲ್ಲಿ ಎರಡು ದಿನ ತೆರಳುವ 12251 ಸಂಖ್ಯೆಯ ರೈಲಿಗೆ ಏಪ್ರಿಲ್‌ ಮೂರರಿಂದ ಜೂನ್‌ 30ರ ವರೆಗೆ, ಕೋರ್ಬಾದಿಂದ ಯಶವಂತಪುರಕ್ಕೆ ವಾರದಲ್ಲಿ ಎರಡು ದಿನ ಬರುವ 12252 ಸಂಖ್ಯೆಯ ರೈಲಿಗೆ ಏಪ್ರಿಲ್‌ ಐದರಿಂದ ಜುಲೈ ಎರಡರ ವರೆಗೆ ಹೆಚ್ಚುವರಿ ಬೋಗಿ ಸೌಲಭ್ಯ ಇರುತ್ತದೆ.

ಯಶವಂತಪುರದಿಂದ ಬಿಕಾನೇರ್‌ಗೆ ವಾರದಲ್ಲಿ ಎರಡು ದಿನ ಸಂಚರಿಸುವ 16587 ಸಂಖ್ಯೆಯ ರೈಲಿಗೆ ಏಪ್ರಿಲ್‌ ಮೂರರಿಂದ 28ರ ವರೆಗೆ ಹಾಗೂ ಬಿಕಾನೇರ್‌ನಿಂದ ಯಶವಂತಪುರಕ್ಕೆ ಬರುವ 16588 ಸಂಖ್ಯೆಯ ರೈಲಿಗೆ ಏಪ್ರಿಲ್‌ ಐದರಿಂದ ಜೂನ್‌ 30ರ ವರೆಗೆ ಹೆಚ್ಚುವರಿ ಬೋಗಿ ಸೇರ್ಪಡೆಯಾಗಲಿದೆ.

ಯಶವಂತಪುರದಿಂದ ಜೈಪುರಕ್ಕೆ ತೆರಳುವ 22695 ಸಂಖ್ಯೆಯ ಎಕ್ಸ್‌ಪ್ರೆಸ್‌ಗೆ ಏಪ್ರಿಲ್‌ 16ರಿಂದ ಜೂನ್‌ 25ರ ವರೆಗೆ ಹಾಗೂ ಜೈಪುರದಿಂದ ಯಶವಂತಪುರಕ್ಕೆ ಬರುವ 22696 ಸಂಖ್ಯೆಯ ರೈಲಿಗೆ ಏ.18ರಿಂದ ಜೂನ್‌ 27ರ ವರೆಗೆ ಎರಡು ಹೆಚ್ಚುವರಿ ದ್ವಿತೀಯ ದರ್ಜೆ ಸ್ಲೀಪರ್‌ ಕೋಚ್‌ಗಳನ್ನು ಅಳವಡಿಸಲಾಗುವುದು.

ಜೈಪುರದಿಂದ ಮೈಸೂರಿಗೆ ಬರುವ ರೈಲಿಗೆ ಏ1ರಿಂದ 29ರ ವರೆಗೆ,  ಮೈಸೂರಿನಿಂದ ಜೈಪುರಕ್ಕೆ ಹೊರಡುವ 12975 ಸಂಖ್ಯೆಯ ರೈಲಿಗೆ ಏ. 4 ರಿಂದ ಮೇ 2ಡರ ವರೆಗೆ ಹೆಚ್ಚುವರಿ ಬೋಗಿ ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT