ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಹಂತದ ಪಂಚಾಯಿತಿ ಇರಲಿ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಪಂಚಾ­ಯತ್‌ ಪರಿಷತ್‌ ಸಭೆಯಲ್ಲಿ ಮುಖ್ಯ­­ಮಂತ್ರಿ ಅವರು ಮೂರು ಹಂತದ ಪಂಚಾಯಿತಿ ವ್ಯವಸ್ಥೆ­ಯಿಂದ 
ನಿರೀ­ಕ್ಷಿತ­ ಮಟ್ಟ­ದಲ್ಲಿ ಅಭಿ­ವೃದ್ಧಿ ಕಾರ್ಯ­ಗಳು ಸಾಗು­ತ್ತಿಲ್ಲ. ಹೀಗಾಗಿ ಎರಡು ಹಂತದ ವ್ಯವ­ಸ್ಥೆಯೇ ಸೂಕ್ತ ಎಂದಿ­ರುವುದು ಅಶ್ಚ­ರ್ಯದ ಜತೆಗೆ ನೋವನ್ನು ಉಂಟುಮಾಡಿದೆ.

ತಳಸಮುದಾಯಗಳ ನೋವು–ತಲ್ಲಣ­ ಕಂಡವರು, ವಿಕೇಂದ್ರೀಕರಣ­ವನ್ನು ಪರಿಣಾ­ಮ­­ಕಾರಿಯಾಗಿ ಜಾರಿ ಮಾಡುವು­ದರ ಬದಲು, ಅದನ್ನು ಮೊಟಕುಗೊಳಿಸಿ ಯುವ­ಕರ ರಾಜ­ಕೀಯ ಪ್ರವೇಶಕ್ಕೆ ತಿಲಾಂಜಲಿ ಇಡಲು ಹೊರ­ಟಿರುವುದು ವಿಷಾದನೀಯ.

ನಿರುದ್ಯೋಗ ಸಮಸ್ಯೆಯನ್ನು ವಿಕೇಂದ್ರೀ­ಕರಣ­ದಿಂದ ತಕ್ಕಮಟ್ಟಿಗೆ ನಿವಾರಿಸಬಹುದು. ಮೂರು ಹಂತದ ಪಂಚಾಯಿತಿ ವ್ಯವಸ್ಥೆಗೆ ಕಾರ್ಯ ನಿರ್ವಹಣಾ ಅಧಿಕಾರಿಗಳು, ಅಭಿ­ವೃದ್ಧಿ ಅಧಿಕಾರಿಗಳು, ಕಾರ್ಯ­ದರ್ಶಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಯುವಕರು ಮತ್ತು ತಳಸಮುದಾಯದ ಚುನಾಯಿತ ಪ್ರತಿ­ನಿಧಿಗಳಿಗೆ ರಾಜಕೀಯ ಐಡೆಂಟಿಟಿ ಜೊತೆಗೆ ಸ್ಥಾನಮಾನಗಳು ದೊರೆಯುತ್ತವೆ.

ಗ್ರಾಮ,  ತಾಲ್ಲೂಕು ಹಾಗೂ ಜಿಲ್ಲಾ ಪಂಚಾ-­ಯಿತಿಗಳಿಗೆ ಹೆಚ್ಚಿನ ಹಾಗೂ ಪ್ರತ್ಯೇಕ ಅಧಿಕಾರ, ಅನುದಾನ ನೀಡ­ಬೇಕು. ಚುನಾ­ವಣೆ ಮೂಲಕ  ಪ್ರತಿನಿಧಿಗಳು ಆಯ್ಕೆಯಾಗಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾರ್ಯ­ಗಳನ್ನು ನಡೆಸುವಂತೆ ಈಗಿರುವ ಮೂರು ಹಂತದ ಪಂಚಾಯಿತಿಗಳು ಬಲಗೊಳ್ಳಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT