ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲವೇತನ ಶೇ 20 ಏರಿಕೆ ಸಾಧ್ಯತೆ

7ನೇ ವೇತನ ಆಯೋಗ: ಇಂದು ತೀರ್ಮಾನ
Last Updated 28 ಜೂನ್ 2016, 23:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಳನೇ ವೇತನ ಆಯೋಗವು ಶಿಫಾರಸು ಮಾಡಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವೇತನ ಏರಿಕೆ ಮಾಡಲು ಬುಧವಾರ ನಡೆಯಲಿರುವ ಸಚಿವ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.

ಆಯೋಗವು ಕೇಂದ್ರ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇಕಡ 14.27ರಷ್ಟು  ಹೆಚ್ಚಳ ಸೇರಿದಂತೆ ಒಟ್ಟಾರೆ ಶೇಕಡ  23.5ರಷ್ಟು ಏರಿಕೆಗೆ ಶಿಫಾರಸು ಮಾಡಿದೆ. ಆದರೆ ಸರ್ಕಾರ ಮೂಲವೇತನದಲ್ಲಿ ಶೇ 20ರಷ್ಟು ಏರಿಕೆ ಮಾಡಬಹುದು ಎನ್ನಲಾಗಿದೆ.

ಕಳೆದ 70 ವರ್ಷಗಳಲ್ಲಿಯೇ ಈ ಬಾರಿ ಮೂಲ ವೇತನದಲ್ಲಿ ಅತಿ ಕಡಿಮೆ ಏರಿಕೆಗೆ ಶಿಫಾರಸು ಮಾಡಿರುವುದು ನೌಕರರ ಸಂಘಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ, ವರದಿ ಅಧ್ಯಯನಕ್ಕೆ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಲಾಗಿದ್ದ ಕಾರ್ಯದರ್ಶಿಗಳ ಸಮಿತಿ ಸಹ ಹೆಚ್ಚು ವೇತನ ಏರಿಕೆಗೆ ಶಿಫಾರಸು ಮಾಡಿರುವುದರಿಂದ ಸಚಿವ ಸಂಪುಟವು ಇದನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ.

6ನೇ ವೇತನ ಆಯೋಗವು ಶೇಕಡ 20ರಷ್ಟು ಮೂಲ ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಆದರೆ ಸರ್ಕಾರ 2008ರಲ್ಲಿ ವೇತನವನ್ನು ಅದರ ಎರಡು ಪಟ್ಟು ಹೆಚ್ಚು ಮಾಡಿತ್ತು. 2016ರ ಜನವರಿಯಿಂದ ಹೊಸ ವೇತನ ಪೂರ್ವಾನ್ವಯವಾಗಿ ಜಾರಿ ಆಗಲಿರುವುದರಿಂದ ಬಾಕಿ ವೇತನವನ್ನು ಒಂದೇ ಬಾರಿಗೆ ಅಥವಾ ಕಂತುಗಳಲ್ಲಿ ವಿತರಿಸುವ ಬಗ್ಗೆಯೂ ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳಲಿದೆ.

2017ರಿಂದ ಜಾರಿ ಸಂಭವ: ಬೊಕ್ಕಸಕ್ಕೆ ಈ ವರ್ಷವೇ ಹೆಚ್ಚಿನ ಹೊರೆಯಾಗುವುದನ್ನು ತಪ್ಪಿಸುವುದಕ್ಕಾಗಿ 2017ರ ಜನವರಿಯಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವ ಸಾಧ್ಯತೆಯೂ ಇದೆ.

ಹಾಗಾದರೆ ನೌಕರರಿಗೆ ಇಡೀ ಒಂದು ವರ್ಷದ ಹಿಂಬಾಕಿ ನೀಡಬೇಕಾಗುತ್ತದೆ. ಮುಂದಿನ ತಿಂಗಳಿನಿಂದಲೇ ಜಾರಿಯಾದರೆ ಆರು ತಿಂಗಳ ಹಿಂಬಾಕಿ ನೀಡಬೇಕಾಗುತ್ತದೆ. ಏರಿಕೆಯಿಂದ ಬೊಕ್ಕಸಕ್ಕೆ ₹1.02 ಲಕ್ಷ ಕೋಟಿ ಹೊರೆ ಹೆಚ್ಚುವರಿ ಹೊರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT