ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಳೆ ಒಡವೆಗಳ ಗೊಡವೆ

ಮಿನುಗು ಮಿಂಚು
Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಅಸ್ಥಿಪಂಜರಕ್ಕೂ ವೈದ್ಯಕೀಯ ಸಂಶೋಧನೆ, ಪ್ರಯೋಗಾಲಯಗಳು, ವಸ್ತು ಸಂಗ್ರಹಾಲಯಗಳು, ದೆವ್ವದ ಸಿನಿಮಾಗಳಿಗೂ ಸಂಬಂಧವಿದೆ. ಅದೇ ಮೂಳೆಗಳಿಂದ ಕಲೆ ರೂಪಿಸುವುದು ಒಂದು ಕಾಲದಲ್ಲಿ ಕಲ್ಪನಾತೀತವಾಗಿತ್ತು. ಆದರೀಗ ಅದು ಉಳಿದ ಕಲೆಗಳಂತೆಯೇ ಅನೇಕರನ್ನು ಆಕರ್ಷಿಸಿದೆ.

ಲೋಹಗಳು, ಪಚ್ಚೆ, ಮುತ್ತು ಹರಗಳುಗಳ ಬೆಲೆ ವಿಪರೀತ ಏರಿದ ಮೇಲೆ ‘ಸಾವಯವ ಒಡವೆ’ಗಳತ್ತ ಜನ ಆಕರ್ಷಿತರಾಗುತ್ತಿರುವುದು ವಿಶ್ವದಾದ್ಯಂತ ಹೆಚ್ಚಾಗಿದೆ. ಹೆಸರೇ ಹೇಳುವಂತೆ ಈ ಒಡವೆಗಳನ್ನು ಮೂಳೆಗಳೂ ಸೇರಿದಂತೆ ಪ್ರಕೃತಿದತ್ತವಾಗಿ ಸಿಗುವ ವಸ್ತುಗಳಿಂದ ತಯಾರಿಸುತ್ತಾರೆ. ನೀರೆಮ್ಮೆ, ಹುಲ್ಲುಗಾವಲಿನ ತೋಳಗಳು, ಹಾವುಗಳು ಮೊದಲಾದ ಪ್ರಾಣಿಗಳ ಮೂಳೆಗಳನ್ನು ಒಡವೆಗಳ ತಯಾರಿಕೆಗೆ ಬಳಸುತ್ತಾರೆ.

ಮೂಳೆಗಳಿಂದ ಒಡವೆಗಳನ್ನು ಮಾಡುವುದು ಪ್ರಾಚೀನ ಕಲೆ. ವಿಶ್ವದಾದ್ಯಂತ ಎಷ್ಟೋ ಆದಿವಾಸಿಗಳು ಮೂಳೆಗಳಿಂದ ಒಡವೆಗಳನ್ನು ಮಾಡುವ ಕಲೆಯಲ್ಲಿ ಬಹಳ ಹಿಂದಿನಿಂದಲೂ ನಿಷ್ಣಾತರಾಗಿದ್ದಾರೆ. ಆಧುನಿಕ ಕಾಲದಲ್ಲಿ ನಗರಗಳಲ್ಲಿ ಇಂಥ ಒಡವೆಗಳ ಬೇಡಿಕೆ ವೃದ್ಧಿಸಿದೆ. ಬಳೆಗಳು, ಕೈಕಡಗಗಳು, ನೆಕ್ಲೇಸ್‌ಗಳು, ಕಿವಿಯೋಲೆಗಳು, ತಲೆಗೆ ಹಾಕಿಕೊಳ್ಳುವ ಪರಿಕರಗಳ ರೂಪದಲ್ಲಿ ಮೂಳೆ ಒಡವೆಗಳು ಸಿಗುತ್ತಿವೆ.

ಬಿಳಿ, ಕಂದು, ಕಪ್ಪು– ಈ ಮೂರು ಬಣ್ಣಗಳಲ್ಲಿ ಮೂಳೆಗಳು ದೊರೆಯುತ್ತವೆ. ಕೆಲವು ಬಣ್ಣದ ಇಂಕ್‌ಗಳನ್ನು ಬಳಸಿ ಇನ್ನಷ್ಟು ವೈವಿಧ್ಯವರ್ಣದ ಮೂಳೆ ಒಡವೆಗಳನ್ನು ರೂಪಿಸುತ್ತಾರೆ. ಶಂಖ, ಮಣಿ ಹಾಗೂ ಕೆಲವು ಅಪರೂಪದ ಹರಳುಗಳಿಂದ ಒಡವೆಗಳಿಗೆ ಮೆರುಗು ಕೊಡುವುದೂ ಉಂಟು.

ಮೂಳೆಗಳಿಂದ ಒಡವೆಗಳನ್ನು ಮಾಡಬಲ್ಲ ಯಾವ ಯಂತ್ರವೂ ಇನ್ನೂ ಅಭಿವೃದ್ಧಿಗೊಂಡಿಲ್ಲ. ಕರಕುಶಲ ಪರಿಣತಿಯಿಂದ ತಯಾರಾಗುವುದರಿಂದಾಗಿ ಈ ಒಡವೆಗಳ ಸಂಗ್ರಾಹ್ಯ ಮೌಲ್ಯ ಹೆಚ್ಚು. ಹೊಸತನದ ಸ್ಪರ್ಶ ನೀಡಿ ಆಧುನಿಕ ಡಿಸೈನರ್‌ಗಳು ಕೂಡ ಮೂಳೆಗಳನ್ನು ಬಳಸಿ ಒಡವೆಗಳನ್ನು ವಿನ್ಯಾಸ ಮಾಡುತ್ತಿರುವುದು ವಿಶೇಶ. ಕಾಲೇಜು ವಿದ್ಯಾರ್ಥಿನಿಯರು ಹಾಗೂ ಪ್ರವಾಸಿಗರನ್ನು ಮೂಳೆಗಳಿಂದ ಮಾಡಿದ ಒಡವೆಗಳು ಹೆಚ್ಚು ಆಕರ್ಷಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT