ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಸುರಂಗ ಕಾರ್ಯ: ಜನ ಸ್ಥಳಾಂತರ

Last Updated 21 ಆಗಸ್ಟ್ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದ ಸುರಂಗ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ­ವಾಗಿ ಚಿಕ್ಕಪೇಟೆಯ ಮಟನ್‌ ಮಾರ್ಕೆಟ್‌ ಬಳಿ ವಸತಿ ಗೃಹಗಳು ಸೇರಿದಂತೆ ಕೆಲ ಕಟ್ಟಡಗಳಿಂದ ಜನ­ರನ್ನು ತಾತ್ಕಾಲಿಕವಾಗಿ ಖಾಲಿ ಮಾಡಿಸಲಾಯಿತು.

ನೆಲ ಮಟ್ಟದಿಂದ 60 ಅಡಿಗಳಷ್ಟು ತಳಭಾಗದಲ್ಲಿ ‘ಸುರಂಗ ಕೊರೆಯುವ ಯಂತ್ರ’ (ಟಿಬಿಎಂ) ಸುರಂಗ ಕೊರೆ­ಯು­ವಾಗ ಮೇಲ್ಭಾಗದಲ್ಲಿರುವ ಹಳೆ ಮತ್ತು ಶಿಥಿಲ ಕಟ್ಟಡಗಳಿಗೆ ಹಾನಿ  ಹಾನಿ ಆಗಬಾರದೆಂಬ ಕಾರಣಕ್ಕೆ ಈ ಮುಂಜಾಗ್ರತೆ ವಹಿಸಲಾಗಿದೆ.

‘ಸುರಂಗ ಕಾಮಗಾರಿ ನಡೆಯುವ ಜಾಗದ ಮೇಲ್ಭಾಗದಲ್ಲಿ 10ರಿಂದ 15 ಚದರ ಮೀಟರ್‌ಗಳಷ್ಟು ವಿಸ್ತೀರ್ಣದ ಜಾಗವನ್ನು ಪ್ರಭಾವ ವಲಯ ಎಂದು ಗುರುತಿಸಲಾಗುತ್ತದೆ. ಆ ವಲಯದಲ್ಲಿ ಬರುವ ಕಟ್ಟಡಗಳು ಶಿಥಿಲಗೊಂಡಿದ್ದರೆ ಅಂತಹ ಕಟ್ಟಡಗಳಿಂದ ಮಾತ್ರ ಜನರನ್ನು ಸ್ಥಳಾಂತರಗೊಳಿಸ­ಲಾಗು­ವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಎಂಜಿನಿ­ಯರ್‌ ಹೆಗ್ಗಾರಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುರಂಗ ನಿರ್ಮಿಸುವಾಗ ಕಟ್ಟಡಗಳಿಗೆ ಹಾನಿ ಆದರೆ ಅವುಗಳನ್ನು ಗುತ್ತಿಗೆದಾರರು ದುರಸ್ತಿ ಮಾಡಿಸಿ­ಕೊಡುತ್ತಾರೆ. ಸುರಂಗ ನಿರ್ಮಾಣ ಆದಂತೆಲ್ಲ ಟಿಬಿಎಂ ಮುಂದೆ ಸಾಗುತ್ತದೆ. ನಂತರ  ಕಟ್ಟಡಗಳನ್ನು ಅವುಗಳ ಮಾಲೀಕರ ಮರು ವಶಕ್ಕೆ ಒಪ್ಪಿಸಲಾಗುವುದು. ಇದೊಂದು ನಿಯಮಿತವಾಗಿ ನಡೆಯುವ ಕಾರ್ಯ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT