ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆಗಳ ಜತೆ ಜಿಂಕೆ ಒಡನಾಟ

Last Updated 6 ಮೇ 2016, 8:55 IST
ಅಕ್ಷರ ಗಾತ್ರ

ಚಳ್ಳಕೆರೆ: ಜಿಂಕೆ ಮರಿಯೊಂದು ಮೇಕೆಗಳ ಹಿಂಡಿನಲ್ಲಿ ಅನ್ಯೋನ್ಯವಾಗಿ ಹೊಂದಿಕೊಂಡ ಅಪರೂಪದ ಘಟನೆ ತಾಲ್ಲೂಕಿನ ಯಲಗಟ್ಟೆ ಗ್ರಾಮದಲ್ಲಿ ನಡೆದಿದೆ. ಐದಾರು ತಿಂಗಳ ಹಿಂದೆ ಕುರಿಗಾಹಿ ತಿಪ್ಪಣ್ಣ ಎಂದಿನಂತೆ ಮೇಕೆಗಳನ್ನು ಅಡವಿಗೆ ಮೇಯಿಸಲು ಹೋಗಿದ್ದಾರೆ.

ಈ ಸಂದರ್ಭ ಆಗತಾನೇ ಜನಿಸಿರುವ ಜಿಂಕೆ ಮರಿಯೊಂದು ಕಣ್ಣಿಗೆ ಕಾಣಿಸಿದೆ. ಕೂಡಲೇ ಜಿಂಕೆ ಮರಿಯ ಬಗ್ಗೆ ಕಾಳಜಿ ವಹಿಸಿ ಮೇಕೆಗಳಿಂದ ಹಾಲುಣಿಸಿದ್ದಾರೆ. ನಂತರ, ಸಂಜೆಗೆ ಮನೆ ಸೇರಿದ ತಿಪ್ಪಣ್ಣ ಜಿಂಕೆ ಮರಿಯನ್ನು ಪ್ರತ್ಯೇಕವಾಗಿ ಆರೈಕೆ ಮಾಡಿದ್ದಾರೆ. ಜತೆಗೆ, ದಿನನಿತ್ಯ ತನ್ನ ಮೇಕೆ ಹಿಂಡಿನ ಜತೆಯಲ್ಲಿ ಮೇವು ಒದಗಿಸಲು ಕರೆದುಕೊಂಡು ಹೋಗುವ ಅಭ್ಯಾಸ ಮುಂದುವರಿಸಿದ್ದಾರೆ.

ಪ್ರತಿನಿತ್ಯ ಮೇಕೆಗಳ ಹಿಂಡಿನಲ್ಲಿ ಬೆಳೆದ ಜಿಂಕೆಮರಿ ಮೇಕೆಗಳ ಹಾಲು ಕುಡಿಯುತ್ತಾ ಬೆಳೆದಿದೆ. ನಂತರ, ಮೇಕೆಗಳಂತೆ ಅಡವಿಗೆ ಹೋಗಿ ಪುನಃ ಹಿಂತಿರುಗುವ ಜಿಂಕೆ ಮರಿಗೆ ಸಂಜೆಯ ವೇಳೆ ಬಿಸ್ಕತ್ತು, ಬಾಳೆಹಣ್ಣು ಮತ್ತು ಹಸಿ ತರಕಾರಿಗಳನ್ನು ನೀಡುತ್ತಿದ್ದಾರೆ. 

ಈ ಜಿಂಕೆ ಮರಿಗೆ ‘ಕೃಷ್ಣ’ ಎಂಬ ಹೆಸರನ್ನಿಟ್ಟಿದ್ದು, ಹೆಸರು ಹಿಡಿದು ಕರೆದರೆ ತಿರುಗಿ ನೋಡಿ ಸ್ಪಂದಿಸುವ ಜಾಣ್ಮೆ ಹೊಂದಿದೆ. ಮೇಕೆ ಮತ್ತು ಜಿಂಕೆಯ ಅನ್ಯೋನ್ಯತೆ ಕಂಡ ಗ್ರಾಮಸ್ಥರು ಪ್ರಾಣಿಗಳಲ್ಲಿರುವ ಹೊಂದಾಣಿಕೆ ಕಂಡು ಬೆರಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT