ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಜಾತಿ ವ್ಯಾಮೋಹ!

Last Updated 25 ಏಪ್ರಿಲ್ 2015, 20:24 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:  ನಗರದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ  ಸಂದರ್ಭದಲ್ಲಿ  ಅಂತರ್ಜಾತಿ  ವಿವಾಹಿತರು ತಮ್ಮನ್ನು ಮೇಲ್ಜಾತಿಯೊಂದಿಗೆ ಗುರುತಿಸಿಕೊಳ್ಳುತ್ತಿರುವ ಪ್ರಸಂಗಗಳೇ ಹೆಚ್ಚಾಗಿರುವುದು ಬೆಳಕಿಗೆ ಬಂದಿವೆ.

ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಪರಿಶಿಷ್ಟ ಮತ್ತು ಹಿಂದುಳಿದ ವರ್ಗದವರು  ಜಾತಿಗಣತಿ ಸಂದರ್ಭದಲ್ಲಿ  ಮಾತ್ರ ಮೇಲ್ಜಾತಿಯೊಂದಿಗೆ ಗುರುತಿಸಿಕೊಳುತ್ತಿರುವುದು ಗಣತಿದಾರರಿಗೆ ಅಚ್ಚರಿ ಮೂಡಿಸಿದೆ.

ಅದರಲ್ಲೂ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಂತೂ ಹಿಂದುಳಿದ ವರ್ಗದ ಜಾತಿ ಹೆಸರುಗಳನ್ನು ಹೇಳಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೆ ಕೆಲವರು ಅಂತರ್ಜಾತಿ ಕುಟುಂಬಗಳಲ್ಲಿ ಗಂಡ–ಹೆಂಡತಿ ‘ನಮ್ಮ ಜಾತಿ ಹೆಸರು ಬರೆಸಬೇಕು, ನಮ್ಮ ಜಾತಿ ಹೆಸರು ಬರೆಸಬೇಕು’ ಎಂದು ತಮ್ಮ ಸಮ್ಮುಖದಲ್ಲಿಯೇ ಮಾತಿನ ಚಕಮಕಿ ನಡೆಸುತ್ತಾರೆ  ಎನ್ನುತ್ತಾರೆ ಗಣತಿದಾರರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT