ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಸೇತುವೆ: ಅನುಷ್ಠಾನಯೋಗ್ಯ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪ್ರೊ.ಕೆ.ಎಸ್. ನಾಗಪತಿಯವರು ಬರೆದ ‘ರಾಜಧಾನಿಯಿಂದ ಮೈಸೂರಿಗೆ ಮೇಲ್ಸೇತುವೆ’ ಲೇಖನಕ್ಕೆ (ಸಂಗತ ಆ. ೧೨)  ಪ್ರತಿಕ್ರಿಯೆ. ಈ ಯೋಜನೆಯತ್ತ ಕರ್ನಾಟಕ ಸರ್ಕಾರ ತನ್ನ ಗಮನವನ್ನು ಹರಿಸುವುದು ಅತ್ಯಗತ್ಯ. ಪ್ರೊ. ನಾಗಪತಿ­ಯವರು ಈ ಯೋಜನೆಯನ್ನು ಒಂದು ಕನಸಿನ ರೂಪದಲ್ಲಿ ಕಾಣಿಸದೆ, ಜಾರಿಗೆ ಯೋಗ್ಯ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ.

ಅಂಕಿ, ಅಂಶಗಳ ಸಮೇತ ಅದಕ್ಕೆ ಆಗಬಹು­ದಾದ ವೆಚ್ಚ, ಆ ವೆಚ್ಚದ ಹಣವನ್ನು ಮರಳಿ ಪಡೆಯುವ ವಿಧಾನ, ಅದರಿಂದ ಜನರಿಗಾಗುವ ಪ್ರಯೋಜನ, ತೊಡಕು­ಗಳ ನಿವಾರಣೆ ಒಳಗೊಂಡಂತೆ ಹೇಗೆ ಇದನ್ನು ನನಸಾಗಿಸಬಹುದು ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡಿದ್ದಾರೆ.

ಬೆಂಗಳೂರು–ಮೈಸೂರು ನಡುವೆ ಈಗಿನ  ಚತುಷ್ಪಥ ರಸ್ತೆಯನ್ನು ಆರು ಅಥವಾ ಎಂಟು ಪಥವಾಗಿ ವಿಸ್ತರಿಸ ಬೇಕೆಂದು ಲೋಕೋಪಯೋಗಿ ಸಚಿವರು ಚಿಂತಿಸುತ್ತಿರುವ ಈ ಕಾಲ ಘಟ್ಟದಲ್ಲಿ ಇಂತಹ ಸಲಹೆಗಳ ಕುರಿತು ವಿಶೇಷವಾದ ಚಿಂತನ ಮಂಥನದ ಅವಶ್ಯಕತೆಯಿದೆ.

–ಡಾ.ಕೆ.ಚಿದಾನಂದ ಗೌಡ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT