ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 24ಕ್ಕೆ ಹಾಜರಾಗದಿದ್ದರೆ ಕ್ರಮ: ಕೇಜ್ರಿವಾಲ್‌ಗೆ ಕೋರ್ಟ್‌ ಎಚ್ಚರಿಕೆ

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದಂತೆ ಮೇ 24ರಂದು ಕೋರ್ಟ್‌ಗೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ  ಎಂದು ‘ಆಮ್‌ ಆದ್ಮಿ ಪಕ್ಷ’ದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್‌ ಹಾಗೂ ಪಕ್ಷದ ಇನ್ನಿತರ ಮೂವರು ಸದಸ್ಯರಿಗೆ ದೆಹಲಿ ಮೆಟ್ರೊಪಾಲಿಟನ್‌ ನ್ಯಾಯಾಲಯ ಶುಕ್ರವಾರ ಎಚ್ಚರಿಕೆ ನೀಡಿದೆ.

ಕೇಂದ್ರ ದೂರಸಂಪರ್ಕ ಸಚಿವ ಕಪಿಲ್‌ ಸಿಬಲ್‌ ಪುತ್ರ, ವಕೀಲ ಅಮಿತ್‌ ಸಿಬಲ್‌ ಅವರು  ಕೇಜ್ರಿವಾಲ್‌,  ಮನಿಷ್‌ ಸಿಸೋಡಿಯಾ, ಪ್ರಶಾಂತ್‌ ಭೂಷಣ್‌ ಹಾಗೂ ಶಾಜಿಯಾ ಇಲ್ಮಿ ವಿರುದ್ಧ ಮಾನನಷ್ಟ ದಾವೆ ಹೂಡಿದ್ದರು.

‘ನ್ಯಾಯಾಲಯದ ವ್ಯಾಜ್ಯಗಳಲ್ಲಿ ದೂರಸಂಪರ್ಕ ಸಂಸ್ಥೆ ಯೊಂದರ ಪರವಾಗಿ ವಾದ ಮಾಡಲು ಅಮಿತ್‌್ ಅವರು ತಮ್ಮ ತಂದೆಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿ ದ್ದಾರೆ’ ಎಂದು ‘ಎಎಪಿ’ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್‌, ಮಾನನಷ್ಟ ಮೊಕದ್ದಮೆ ದಾಖಲಿಸಿ ದ್ದರು. ‘ಮುಂದಿನ ವಿಚಾರಣೆ ದಿನ ಕಕ್ಷಿದಾರರು ಕೋರ್ಟ್‌್ ಮುಂದೆ ಹಾಜರಾಗುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ನ್ಯಾಯಾಧೀಶ ಸುನಿಲ್‌್ ಕುಮಾರ್‌್ ಶರ್ಮಾ ಅವರು ‘ಎಎಪಿ’ ಪರ ವಕೀಲ ರಾಹುಲ್‌್ ಮೆಹ್ರಾ ಅವರಿಗೆ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT