ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 4ರಿಂದ ಕೇದಾರನಾಥ ಯಾತ್ರೆ

Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಡೆಹ್ರಾಡೂನ್‌ (ಪಿಟಿಐ): ಕೇದಾರನಾಥ ದೇಗುಲದ ಬಾಗಿಲುಗಳು ಮೇ 4ರಂದು ತೆರೆಯ­ಲಿದ್ದು, ದಿನಕ್ಕೆ 1,000 ಭಕ್ತರನ್ನು ಮಾತ್ರ ಒಳಗೆ ಬಿಡ­ಲಾಗುತ್ತದೆ ಎಂದು ಉತ್ತರಾ­ಖಂಡ ಮುಖ್ಯಮಂತ್ರಿ ಹರೀಶ್‌ ರಾವತ್‌ ತಿಳಿಸಿದ್ದಾರೆ.

ಇದಕ್ಕೂ ಮುನ್ನವೇ ಮೇ 2ರಂದು ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳ ಬಾಗಿಲುಗಳು ಭಕ್ತರಿ­ಗಾಗಿ ತೆರೆಯ­ಲಿದ್ದು, ಮೇ 5ರಂದು ಬದರಿ­ನಾಥ ದೇವಸ್ಥಾನ ತೆರೆಯುವುದು ಎಂದು ಅವರು ಹೇಳಿದ್ದಾರೆ.

ಯಾತ್ರಾ­­ರ್ಥಿಗಳ ಸುರಕ್ಷ­ತೆಯ ಬಗ್ಗೆ ಯಾರೂ ಭಯ­ಪಡುವ ಅವ­ಶ್ಯ­ಕತೆ ಇಲ್ಲ. ಭೂಕುಸಿತದ ಪ್ರದೇಶ­ಗಳಲ್ಲಿ ಅಗತ್ಯ ತುರ್ತು ಕ್ರಮ­ವಾಗಿ ಪ್ರಯಾ­ಣಿಕರನ್ನು ವಾಯುಯಾನ­ಸೇವೆಯ ಮೂಲಕ ಸ್ಥಳಾಂತರಿಸಲಾಗು­ವುದು. ಇಕ್ಕಟ್ಟಿಗೆ ಸಿಲುಕುವ ಜನರನ್ನು ತೆರವು­ಗೊಳಿಸಲು ಎಸ್‌ಡಿಆರ್‌ಎಫ್‌ ಸಿಬ್ಬಂದಿ­ಯನ್ನು ನಿಯೋಜಿಸಲಾಗು­ವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT