ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ26ಕ್ಕೆ ಮೋದಿ ಪ್ರಮಾಣ ವಚನ

Last Updated 20 ಮೇ 2014, 11:32 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನೂತನ ಪ್ರಧಾನಿಯಾಗಿ ಮೇ 26ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಮಂಗಳವಾರ ಹೇಳಿದರು.

ಎನ್‌ಡಿಎ ನಾಯಕರೊಂದಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿದ ಬಳಿಕ ರಾಷ್ಟ್ರಪತಿ ಭವನದೆದುರು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಗ್ ಅವರು ಪ್ರಮಾಣ ವಚನದ ದಿನಾಂಕವನ್ನು ಘೋಷಿಸಿದರು.

`ಇಂದು ನಾವು ಬಿಜೆಪಿ ಸಂಸದೀಯ ಸಭೆ ನಡೆಸಿದೇವು. ಅದರಲ್ಲಿ ಮೋದಿ ಅವರನ್ನು ನಮ್ಮ ನಾಯಕನಾಗಿ ಸ್ವೀಕರಿಸುವ ಅವಿರೋಧ ಗೊತ್ತುವಳಿ ಮಂಡಿಸಲಾಯಿತು. ಸಭೆಯಲ್ಲಿ ಎನ್‌ಡಿಎನ ಎಲ್ಲ ಮಿತ್ರಪಕ್ಷಗಳ ಸದಸ್ಯರು ಕೂಡ ಹಾಜರಿದ್ದರು' ಎಂದರು.

ಇದೇ ವೇಳೆ ಅವರು, `ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಆಹ್ವಾನ ನೀಡಬೇಕೆಂದು ಕೋರಿ ನಾವು ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಂಡೆವು' ಎಂದು ಹೇಳಿದರು.

'ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ವೇಳೆ  10 ಎನ್‌ಡಿಎ ಮಿತ್ರಪಕ್ಷಗಳು ಸೇರಿದಂತೆ  335 ಸಂಸದರು ಬೆಂಬಲ ವ್ಯಕ್ತಪಡಿಸಿದ  ಪತ್ರವನ್ನು ಸಲ್ಲಿಸಲಾಯಿತು' ಎಂದು ಸಿಂಗ್ ತಿಳಿಸಿದರು.

'ಪ್ರಮಾಣ ವಚನ ಸಮಾರಂಭಕ್ಕೆ 3 ಸಾವಿರ ಜನರಿಗೆ ಆಹ್ವಾನಿಸಲು ಉದ್ದೇಶಿಸಿದ್ದು, ಸಮಾರಂಭದ ಸಮಯವನ್ನು ಶೀಘ್ರದಲ್ಲಿಯೇ ಘೋಷಿಸಲಾಗುವುದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT