ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೊಸಾಫ್ಟ್‌–ನೋಕಿಯಾ ವಿಲೀನ 25ಕ್ಕೆ ಪೂರ್ಣ

ಬಲವಂತದ ‘ವಿಆರ್‌ಎಸ್‌’; ಚೆನ್ನೈ ಘಟಕದಲ್ಲಿ ಕಾರ್ಮಿಕರ ಪ್ರತಿಭಟನೆ
Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪ್ಯೂ­ಟರ್ ಸಾಫ್ಟ್‌ವೇರ್ ಕಂಪೆನಿ ಮೈಕ್ರೊ­ಸಾಫ್ಟ್‌­ನಲ್ಲಿ, ‘ನೋಕಿಯಾ’ ಕಂಪೆನಿಯ  ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕೆ ವಿಭಾಗದ ವಿಲೀನ ಪ್ರಕ್ರಿಯೆ ಏ. 25ಕ್ಕೆ ಪೂರ್ಣ­ಗೊಳ್ಳ­ಲಿದೆ ಎಂದು ನೋಕಿಯಾ ಪ್ರಕಟಣೆ­ಯಲ್ಲಿ ತಿಳಿಸಿದೆ.

ಫಿನ್ಲೆಂಡ್ ಮೂಲದ ದೂರಸಂಪರ್ಕ ಉಪಕರಣಗಳ ತಯಾರಿಕಾ ಕಂಪೆನಿ ‘ನೋಕಿ­ಯಾ’ದ  ಮೊಬೈಲ್ ಹ್ಯಾಂಡ್‌­ಸೆಟ್ ವಹಿವಾಟು ವಿಭಾಗವನ್ನು ಮೈಕ್ರೊಸಾಫ್ಟ್‌ ಇತ್ತೀಚೆಗೆ ಸುಮಾರು 717 ಕೋಟಿ ಡಾಲರ್‌ಗೆ (₨47,200 ಕೋಟಿಗೆ) ಸ್ವಾಧೀನಪಡಿಸಿಕೊಂಡಿತ್ತು.
ಈ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ನಂತರವೂ ಉಭಯ ಕಂಪೆನಿಗಳ ನಡು­ವಿನ ‘ಸೇವಾ ಒಪ್ಪಂದ’ದಂತೆ ನೋಕಿ­ಯಾದ ವಿವಾದಿತ ಚೆನ್ನೈ ತಯಾರಿಕಾ ಘಟಕ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ವಕ್ತಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನೋಕಿಯಾದ ಚೆನ್ನೈನಲ್ಲಿನ ಹ್ಯಾಂಡ್‌ಸೆಟ್‌ ತಯಾರಿಕಾ ಘಟಕದಲ್ಲಿ ಸದ್ಯ 6,600 ಸಿಬ್ಬಂದಿ ಕಾರ್ಯ­ನಿರ್ವಹಿ ಸುತ್ತಿದ್ದಾರೆ. ಆದರೆ, ಇವರಲ್ಲಿ 700 ಮಂದಿ ಈಗಾಗಲೇ ಸ್ವಯಂ ನಿವೃತ್ತಿ ಯೋಜನೆಗೆ (ವಿಆರ್‌­ಎಸ್‌) ಅರ್ಜಿ ಸಲ್ಲಿಸಿದ್ದಾರೆ. ಈ ಘಟಕ ಮಾರಾಟ ತೆರಿಗೆ ವಿವಾದದಲ್ಲೂ ಸಿಲುಕಿಕೊಂಡಿದೆ. 

ಈ ಹಿನ್ನೆಲೆಯಲ್ಲಿ ಮೈಕ್ರೊಸಾಫ್ಟ್‌ಗೆ ಇಲ್ಲಿನ ಘಟಕವನ್ನು ಹಸ್ತಾಂತರಿಸುವು ದಕ್ಕೂ ಮುನ್ನ ತಮಿಳು­ನಾಡು ಸರ್ಕಾ ರಕ್ಕೆ ನೋಕಿಯಾ ₨3,500 ಕೋಟಿ ಭದ್ರತೆ ನೀಡಬೇಕು ಎಂದು ಮಾ.­ 14ರಂದು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು.

ಚೆನ್ನೈ ತಯಾರಿಕಾ ಘಟಕ ಪ್ರತಿ ದಿನ 10 ಲಕ್ಷ ಮೊಬೈಲ್‌ ಹ್ಯಾಂಡ್‌ಸೆಟ್‌ ತಯಾರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಇತ್ತೀಚೆಗೆ ತಯಾರಿಕೆ ಗಣನೀ­ಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕಂಪೆನಿ ‘ವಿಆರ್‌ಎಸ್‌’ ತೆಗೆದುಕೊಳ್ಳು ವಂತೆ ಕಾರ್ಮಿಕರನ್ನು ಒತ್ತಾಯಿಸುತ್ತಿದೆ ಎನ್ನುತ್ತಾರೆ ನೋಕಿಯಾ ಇಂಡಿಯಾದ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಎ.ಸುಂದರ­ರಾಜನ್‌.

ಈ ಮಧ್ಯೆ, ‘ವಿಆರ್‌ಎಸ್‌’ಗೆ ಅರ್ಜಿ ಸಲ್ಲಿಸಿ­ರುವವರ ಸಂಖ್ಯೆ ಖಚಿತಪಡಿಸಲು ನೋಕಿಯಾ ವಕ್ತಾರ ನಿರಾಕರಿಸಿದ್ದಾರೆ. ಬಲವಂತವಾಗಿ ‘ವಿಆರ್‌ಎಸ್‌’ ಹೇರಲಾಗುತ್ತಿದೆ ಎಂದು ಆರೋಪಿಸಿ ಕೆಲವು ಕಾರ್ಮಿಕರು ಮಂಗಳವಾ­ರದಿಂದ ಕ್ಯಾಂಟೀನ್‌ ಸೇವೆಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT