ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಕಳವಿಗೆ ಎಫ್‌ಐಆರ್‌ ಕಡ್ಡಾಯ: ಸಲಹೆ

Last Updated 22 ಏಪ್ರಿಲ್ 2014, 20:09 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿ ಮೊಬೈಲ್‌ ಕಳವು ಪ್ರಕರಣದ ಬಗ್ಗೆ ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿ­ಸುವ ಜತೆಗೆ ಅಂತಹ ಮೊಬೈಲ್‌ಗೆ ತಕ್ಷಣವೇ ಸಂಪರ್ಕ ಸೇವೆ ರದ್ದುಗೊ­ಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ದೂರ­ಸಂಪರ್ಕ ಇಲಾಖೆಯು (ಡಿಒಟಿ) ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

ಕಳುವಾದ ಮೊಬೈಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ವಿದ್ರೋಹಿ ಚಟು­ವ­ಟಿಕೆಗಳಿಗೆ ಬಳಕೆ­ಯಾಗುತ್ತಿರುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

ಮೊಬೈಲ್‌ ಕಳವು ಪ್ರಕರಣಗಳ ಬಗ್ಗೆ ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿಸಿ, ಸೇವೆ ಕಡಿತಗೊಳಿಸಿದರೆ ಅದು ದುಷ್ಕೃತ್ಯಗಳಿಗೆ ಬಳಕೆ­ಯಾಗುವುದನ್ನು ತಡೆಯ­ಬಹುದು. ಜತೆಗೆ ಇದರಿಂದ ಮೊಬೈಲ್‌ ಕಳವು ಪ್ರಮಾಣವೂ ತಗ್ಗ­ಬಹುದು ಎಂದು ಇಲಾಖೆ ಅಭಿಪ್ರಾಯ­ಪಟ್ಟಿದೆ.

ಈಗ ಮೊಬೈಲ್‌ ಕಳವು ಪ್ರಕರಣದ ಬಗ್ಗೆ ಎಫ್‌ಐಆರ್‌ ದಾಖಲಿಸುವುದು ಕಡ್ಡಾಯವಲ್ಲ. ಬಹುತೇಕ ಪ್ರಕರಣ­ಗಳಲ್ಲಿ ಮೊಬೈಲ್‌ ಕಳೆದುಕೊಂಡ­ವರು ತಮಗೆ ಸೇವೆ ಒದಗಿಸುವ ಕಂಪೆನಿಗೆ ಕರೆ ಮಾಡಿ ‘ಸಿಮ್‌ ಕಾರ್ಡ್‌’ಗೆ ಯಾವುದೇ ಸೇವೆ ಒದಗಿಸದಂತೆ ಕೋರಿ, ಅದೇ ಅಂಕಿಗಳ ಸಿಮ್‌ ನೀಡುವಂತೆ ಮನವಿ ಮಾಡು­ತ್ತಾರೆ. 

ಮೊಬೈಲ್‌ ಕಳೆದುಕೊಂಡವರು ಪೊಲೀಸ­ರಿಗೆ ದೂರು ನೀಡಿದರೂ ಪೊಲೀಸರು ಆ ಬಗ್ಗೆ ಎಫ್‌ಐಆರ್‌ ದಾಖಲಿಸುವುದಿಲ್ಲ; ಕೇವಲ ಸ್ವೀಕೃತಿ ಪತ್ರ (ಅಕ್ನಾಲೆಜ್‌ಮೆಂಟ್‌) ನೀಡಿ ಸಾಗಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT