ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರಮ್ ಅಕ್ರಮ ಸಾಗಣೆ: ಟಿಪ್ಪರ್ ವಶ

Last Updated 30 ಜುಲೈ 2014, 10:39 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನಲ್ಲಿ ನಡೆಯು­ತ್ತಿರುವ ಗಿಣಿಗೇರಾ–- ಗದ್ವಾಲ್ ಮಾರ್ಗದ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಗೆ ಅರಣ್ಯ ಇಲಾಖೆ ಜಮೀನಿನ ಮೊರಮ್‌ನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಟಿಪ್ಪರನ್ನು ವಶಪಡಿಸಿ­ಕೊಳ್ಳಲಾಗಿದೆ.

ತಾಲ್ಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ಲಿಂಗದಳ್ಳಿ ಗ್ರಾಮದ ಅರಣ್ಯ ಭೂಮಿಯಲ್ಲಿ ಸುಮಾರು ಏಳು ಕ್ಯೂಬಿಕ್ ಘನ ಮೀಟರ್ ಮರಮ್ ಅಗೆದು ಸಾಗಿಸಲಾಗಿದ್ದು, ಈ ಸಂಬಂಧ ಮಹೇಶ ಸೇರಿ ಇಬ್ಬರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಜು. 21ರಂದು ಟಿಪ್ಪರ್‌ ವಶಕ್ಕೆ ಪಡೆದಿದ್ದರೂ, ಪ್ರಕರಣ ದಾಖಲಿಸರಲಿಲ್ಲ. ಇಲಾಖೆ ಅಧಿಕಾರಿ ವಿರುದ್ಧ ಈ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ಸಲ್ಲಿಸಿರುವುದಾಗಿ ಗ್ರಾಮದ ಮೂಕಪ್ಪ ತಿಳಿಸಿದ್ದಾರೆ.

ಗಂಗಾವತಿ ವಲಯ ಅರಣ್ಯಾಧಿಕಾರಿ ಗುರನಗೌಡ ಆರೋಪ ನಿರಾಕರಿಸಿದ್ದು, ಅಕ್ರಮಕ್ಕೆ ಅವಕಾಶ ನೀಡದ ಕಾರಣ ಆರೋಪ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT