ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಅಮ್ಮನ ಉಡುಗೊರೆ

Last Updated 22 ಮೇ 2014, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ನಿಯೋಜಿತ ಪ್ರಧಾನಿ ಮೋದಿ ಅವರು ಗುರುವಾರ ತವರು ರಾಜ್ಯ ಗುಜರಾತ್‌ನಿಂದ ದೆಹಲಿಗೆ ಪಯಣ ಬೆಳೆಸಿದರು.
  ದೆಹಲಿಗೆ ತೆರಳುವ ಮುನ್ನ ಮೋದಿ ಅವರು ತಮ್ಮ ತಾಯಿ 94 ವರ್ಷದ  ಹೀರಾಬಾ ಅವರ ಬಳಿ ತೆರಳಿ ಆಶೀ­ರ್ವಾದ ಪಡೆದರು.

ಭಾವುಕ­ರಾದ ಹೀರಾಬಾ,  ಹೊಸ ಸವಾಲು ಎದು­ರಿ­ಸಲು ಮಗ­ನಿಗೆ ₨101 ನೀಡಿ ಆಶೀ­ರ್ವಾ­­ದಿಸಿ­ದರು. ಮೋದಿ  ಅವರಿಗೆ ಸಿಹಿ ತಿನ್ನಿಸಿ, ಸೀರೆಗೆ ಸಿಕ್ಕಿಸಿಕೊಂಡಿದ್ದ ಟವೆಲ್‌­ನಿಂದ ಮಗನ ಮುಖ ಒರೆಸಿದರು. ವಿಮಾನನಿಲ್ದಾಣದಲ್ಲಿ ಮೋದಿ ಅವರು ‘ಆವ್ಜೊ ಗುಜರಾತ್‌’ (ವಿದಾಯ) ಎನ್ನುತ್ತ ಎಲ್ಲರತ್ತ ಕೈಬೀಸಿ ನಡೆದರು.

ತಾಯಿ, ಪತ್ನಿಗೆ ಎಸ್‌ಪಿಜಿ ಭದ್ರತೆ: ನರೇಂದ್ರ ಮೋದಿ ಅವರು ಪ್ರಧಾನಿ­ಯಾಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ  ತಾಯಿ ಹೀರಾಬಾ ಹಾಗೂ ಪತ್ನಿ ಜಶೋದಾಬೆನ್‌ ಅವರು ಎಸ್‌ಪಿಜಿ ಭದ್ರತೆಯ ವ್ಯಾಪ್ತಿಗೆ ಒಳಪಡಲಿದ್ದಾರೆ.  ಆದರೆ, ಅವರ ಮೂವರು ಸಹೋ­ದರರು ಹಾಗೂ ಇಬ್ಬರು ಸಹೋದರಿ­ಯರಿಗೆ ‘ಝಡ್‌’ ಶ್ರೇಣಿಯ ಭದ್ರತೆ ದೊರೆಯಲಿದೆ.

ಪ್ರಮಾಣವಚನಕ್ಕೆ ತಯಾರಿ: ಮೋದಿ ಅವರ ಪ್ರಮಾಣವಚನಕ್ಕೆ ಸಕಲ ಸಿದ್ಧತೆ­ಗಳು ನಡೆದಿದ್ದು, ರಾಷ್ಟ್ರಪತಿ ಭವನದ ಸಿಬ್ಬಂದಿ ತಯಾರಿಯಲ್ಲಿದ್ದಾರೆ.

ಸೋನಿಯಾ ಅಭಿನಂದನೆ: ಮೋದಿ ಅವ­ರನ್ನು ಅಭಿನಂದಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮಂಗಳವಾರವೇ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕಾಕ್ರಾ, ಢೋಕ್ಲಾ

ಗುಜರಾತಿ ಜನರ ಜನಪ್ರಿಯ ಆಹಾರಗಳಾದ ಕಾಕ್ರಾ, ಢೋಕ್ಲಾ ಇನ್ನು ಮುಂದೆ ಪ್ರಧಾನಿ ಕಚೇರಿ­ಯಲ್ಲಿ ಲಭ್ಯವಾಗಲಿವೆ. ಗುಜರಾತ್‌ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಬುಧ­ವಾರ ಮಾತನಾಡುವಾಗ ಮೋದಿ ಅವರು ಈ ಮಾತು ಹೇಳಿದಾಗ ಎಲ್ಲರೂ ನಕ್ಕು­ಬಿಟ್ಟಿದ್ದರು.

ಆದರೆ, ಗುರುವಾರ ಗುಜ­ರಾತ್‌ಗೆ ವಿದಾಯ ಹೇಳಿ ದೆಹಲಿಗೆ ತೆರಳು­ವಾಗ 12 ವರ್ಷ­ದಿಂದ ತಮಗೆ ಅಡುಗೆ ಮಾಡಿ ಹಾಕು­­ತ್ತಿದ್ದ ಬಾಣಸಿಗ ಬದ್ರಿ ಎಂಬುವವರನ್ನು ಮೋದಿ ಜತೆಗೆ ಕರೆದೊಯ್ದರು. ಬದ್ರಿ, ಮೋದಿ ಅವರ ಬಾಣಸಿ­ಗರಷ್ಟೇ ಅಲ್ಲ. 12 ವರ್ಷಗಳಿಂದ ಮೋದಿ ಅವರ ಬಂಗ್ಲೆಯಲ್ಲೇ ಉಳಿದುಕೊಂಡು, ಅವರ ಯೋಗ­ಕ್ಷೇಮ ನೋಡಿಕೊಳ್ಳುತ್ತಿದ್ದರು.`

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT