ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಗುರಿಯಿಟ್ಟಿದ್ದ ಉಗ್ರರು

ಪಟ್ನಾ ಸರಣಿ ಸ್ಫೋಟ ಪ್ರಕರಣ
Last Updated 21 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ ವರ್ಷ ಬಿಹಾರದ ಪಟ್ನಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಪ್ರಕರ­ಣಕ್ಕೆ ಸಂಬಂಧಿಸಿ­ದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಫೋಟದ ಸೂತ್ರ­­ಧಾರಿ ಎನ್ನ­ಲಾಗಿರುವ ಹೈದರ್‌ ಅಲಿ ಅಲಿಯಾಸ್‌ ‘ಬ್ಲ್ಯಾಕ್‌ ಬ್ಯೂಟಿ’ ಮತ್ತು ಒಬ್ಬ ಬಾಲಕ ಸೇರಿ­ದಂತೆ ಒಟ್ಟು ನಾಲ್ವರು ಶಂಕಿತರನ್ನು ಬಂಧಿಸಿದೆ.

‘ಅಲಿ ಅವರನ್ನು ಹೊರತು ಪಡಿಸಿ ತೌಫಿಕ್‌ ಅನ್ಸಾರಿ, ಮೊಜಿಬುಲ್‌ ಮತ್ತು ನುಮನ್‌ ಅನ್ಸಾರಿ ಅವರನ್ನು ರಾಂಚಿ­ಯಲ್ಲಿ ಬಂಧಿಸಲಾಗಿದೆ. ಇದು ನಮಗೆ ಸಿಕ್ಕ ದೊಡ್ಡ ಯಶಸ್ಸು’ ಎಂದು ಎನ್‌ಐಎ ಮಹಾನಿರ್ದೇಶಕ ಶದರ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ನಿಷೇಧಿತ ಉಗ್ರ ಸಂಘ­ಟನೆ ಸಿಮಿ ಮತ್ತು ಇಂಡಿಯನ್‌ ಮುಜಾ­ಹಿದ್ದೀನ್‌­ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನ­ಲಾಗಿರುವ ಇವರು ಕಳೆದ ವರ್ಷ ಅ.27 ರಂದು ಪಟ್ನಾದಲ್ಲಿ ಆಯೋಜಿಸ­ಲಾ­ಗಿದ್ದ ರ್‍್ಯಾಲಿಯಲ್ಲಿ ನರೇಂದ್ರ ಮೋದಿ ಅವ­ರನ್ನು ಗುರಿಯಾಗಿಸಿಕೊಂಡು ಬಾಂಬ್‌ ಸ್ಫೋಟ ಮಾಡುವ ಸಂಚು ರೂಪಿಸಿ­ದ್ದರು ಎಂದು ಅವರು ಹೇಳಿದರು.

‘ಮೋದಿ ರ್‍್ಯಾಲಿ ಆಯೋಜನೆ ಆಗಿ­ದ್ದ ಸ್ಥಳಕ್ಕೆ ಭೇಟಿ ನೀಡಿ ಅವರ (ಮೋದಿ) ಸಮೀಪಕ್ಕೆ ಹೋಗುವುದು ಹೇಗೆ ಎನ್ನುವ ಬಗ್ಗೆ ಯೋಜನೆ ರೂಪಿಸುತ್ತಿದ್ದೆವು’ ಎಂದು ಬಂಧಿ­ತರು ತಿಳಿಸಿದ್ದಾರೆ’ ಎಂದು ಕುಮಾರ್‌ ಹೇಳಿದರು.

‘ಉಗ್ರರು ಅಕ್ಬರ್‌ಪುರ, ಕಾನ್ಪುರ್ (ಉತ್ತರ ಪ್ರದೇಶ), ದೆಹಲಿ ಮತ್ತು ಪಟ್ನಾಗೆ ಹೋಗಿ ಅಲ್ಲಿ ಸ್ಫೋಟ ನಡೆ­ಸುವ ಕುರಿತು ಯೋಜನೆ ರೂಪಿಸಿದ್ದರು. ಆದರೆ ಮೋದಿ ಅವರ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮೋದಿ ಅವರಿದ್ದ ಸ್ಥಳದಲ್ಲಿ ಬಾಂಬ್‌ ಇಡುವುದು ಅವರಿಗೆ ಸಾಧ್ಯವಾ­ಗಿ­ರಲಿಲ್ಲ’ ಎಂದು ಅವರು ವಿವರಿಸಿದರು.

ಹಿಂದೂತ್ವ ಉಗ್ರರ ಪ್ರಕರಣಗಳ ತನಿಖೆ
ನಿಲ್ಲದು–ಎನ್‌ಐಎ: ಅಧಿಕಾರದಿಂದ ನಿರ್ಗ­ಮಿ­ಸು­­ತ್ತಿ­ರುವ ಯುಪಿಎ ಸರ್ಕಾರ ವಹಿಸಿ­ದ ಹಿಂದೂತ್ವ ಉಗ್ರ­ರಿಗೆ ಸಂಬಂಧಿ­ಸಿದ ಪ್ರಕ­ರಣಗಳ ತನಿಖೆ­ಯನ್ನು ಮುಂದು­­ವರಿಸು­ವು­ದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಧಾನ ನಿರ್ದೇಶಕ ಶರದ್‌ ಕುಮಾರ್‌ ಬುಧವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT