ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ ಡಿವಿಎಸ್‌ ವಿವರಣೆ

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಐದು ತಿಂಗಳಲ್ಲಿ ತಮ್ಮ ಆಸ್ತಿ ಎರಡು ಪಟ್ಟು ಹೆಚ್ಚಾಗಿರುವ ಕುರಿತು ಪ್ರಕಟ­ವಾದ ವರದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ  ಅವರಿಗೆ ಸ್ವಯಂ ಪ್ರೇರಣೆಯಿಂದ ವಿವರಣೆ ಕೊಡುವು­ದಾಗಿ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಸ್ಪಷ್ಟಪಡಿಸಿ­ದ್ದಾರೆ.

‘ನನ್ನ ಆಸ್ತಿ ಎರಡು ಪಟ್ಟು ಹೆಚ್ಚಾಗಿ­ರುವುದಾಗಿ ಪ್ರಕಟವಾದ ವರದಿ ಕುರಿತು ಪ್ರಧಾನಿ ಸ್ಪಷ್ಟನೆ ಕೇಳಿಲ್ಲ. ಆದರೆ, ಈ ಬಗ್ಗೆ ಉಂಟಾಗಿರುವ ಗೊಂದಲವನ್ನು ನಿವಾರಣೆ ಮಾಡಲು ಸ್ವಯಂ ಪ್ರೇರಿತವಾಗಿ ವಿವರಣೆ ನೀಡು­ತ್ತೇನೆ’ ಎಂದು ಸದಾನಂದಗೌಡ ಸೋಮ­­ವಾರ ರಾತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ನನ್ನ ಮಗನ ಮೇಲೆ ಆರೋ­ಪ­ಗಳು ಬಂದಾಗಲೂ ಮೋದಿ ಅವರಿಗೆ ವಿವರಣೆ ನೀಡಿದ್ದೆ. ಆ ಪರಂಪರೆಯನ್ನು ಮುಂದುವರಿ­ಸುತ್ತೇನೆ. ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತಿತರ ಹಿರಿಯ ನಾಯಕರಿಗೂ ಸತ್ಯವೇನೆಂದು ವಿವರಿ­ಸುತ್ತೇನೆ’ ಎಂದು ಸದಾನಂದ ಗೌಡ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT