ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಕರಣ: ಕೋರ್ಟ್‌ ಸೂಚನೆ

Last Updated 5 ಜುಲೈ 2014, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಲೋಕಸಭೆ ಚುನಾವಣಾ ಪ್ರಚಾರದ  ವೇಳೆ ನರೇಂದ್ರ ಮೋದಿ ಅವರ ವಿರುದ್ಧ ದಾಖಲಿಸಲಾಗಿದ್ದ ಜನಪ್ರತಿ­ನಿಧಿ ಕಾಯ್ದೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮ­ಗಳ ಬಗ್ಗೆ ವರದಿ ನೀಡು­ವಂತೆ ಗುಜರಾತ್‌ ಪೊಲೀಸರಿಗೆ ಸ್ಥಳೀಯ ನ್ಯಾಯಾ­ಲಯ ಶನಿವಾರ ಸೂಚಿಸಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿ­­ಸ್ಟ್ರೇಟ್‌ ಎಂ.ಎಂ. ಷೇಕ್‌ ಅವರು ಆ.5ರ ಒಳಗೆ ವರದಿ ನೀಡು­ವಂತೆ ಗುಜರಾತ್‌ ಅಪರಾಧ ವಿಭಾಗ ಪೊಲೀಸ­ರಿಗೆ ನಿರ್ದೇಶನ ನೀಡಿದ್ದಾರೆ.

ಏ. 30 ರಂದು ಗುಜರಾತ್‌ನಲ್ಲಿ  26 ಕ್ಷೇತ್ರಗಳ ಮತದಾನ ಪ್ರಕ್ರಿಯೆ ನಂತರ ನಡೆಸಿದ ಪತ್ರಿಕಾ ಗೋಷ್ಠಿ­ಯಲ್ಲಿ  ಮೋದಿ ಅವರು ಪಕ್ಷ ಚಿನ್ಹೆ­ಯನ್ನು ಕೈಸನ್ನೆ ಮೂಲಕ ತೋರಿಸಿ­ದ್ದರು. ಈ ಹಿನ್ನೆಲೆ­ಯಲ್ಲಿ ಚುನಾವಣೆ ಆಯೋಗದ ನಿರ್ದೇ­ಶ­ನದ ಮೇರೆಗೆ ಅಪರಾಧ ವಿಭಾಗದ ಪೊಲೀಸರು ಮೋದಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT