ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಶ್ರೇಷ್ಠ ವಾಕ್ಪಟು: ಕೇಜ್ರಿವಾಲ್‌

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಪ್ರಧಾನಿ ನರೇಂದ್ರ ಮೋದಿ ಒಬ್ಬ ‘ಶ್ರೇಷ್ಠ ವಾಕ್ಪಟು’ ಮತ್ತು ಅವರು  ಸರಿಯಾದ ಸಂದೇಶಗಳನ್ನು ನೀಡು­ತ್ತಾರೆ, ಆದರೆ,  ನೀಡಿರುವ ಭರವಸೆ­ಗಳನ್ನು ಜಾರಿ­ಮಾಡುವಲ್ಲಿ ತುಂಬಾ ನಿಧಾನ ಎಂದು ಆಮ್‌ ಆದ್ಮಿ ಪಕ್ಷ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಪ್ರಭಾವಿತಳಾಗಿಲ್ಲ: ಶೀಲಾ

‘ಪ್ರಧಾನಿ ಮೋದಿ ಕಾರ್ಯ­ಶೈಲಿ­ಯಿಂದ ನಾನು ಪ್ರಭಾವಿತಳಾಗಿಲ್ಲ’ ಎಂದು ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌ ಹೇಳಿದ್ದಾರೆ.
‘ಮೋದಿ ದೂರದೃಷ್ಟಿ ಇರುವ ವ್ಯಕ್ತಿ.  ಆದರೆ ಅವರಿಂದ ಪ್ರಭಾವಿತ­ಳಾಗಿದ್ದೇನೆ ಎಂದು ಹೇಳಲು ನಾನು ಬಯಸುವುದಿಲ್ಲ’ ಎಂದಿದ್ದಾರೆ.

ಮೋದಿ ಪ್ರಧಾನಿಯಾಗಿ 5 ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ದೇಶದಲ್ಲಿ ಕೆಲ ಮಟ್ಟಿಗೆ ಸಕರಾತ್ಮಕ ಭಾವನೆ ಬಿತ್ತಿದ್ದಾರೆ. ಆದರೆ ಜನರ ಆಶೋತ್ತರ­ಗಳು ಈಡೇರಿ­ವೆಯೇ ಎನ್ನು-­ವು­ದನ್ನು ಕಾಲವೇ ಹೇಳ­ಲಿದೆ ಎಂದು ತಿಳಿಸಿದ್ದಾರೆ.

ಬದಲಾವಣೆಗಾಗಿ ದೇಶದ ಜನರು ಕಾತರರಾಗಿದ್ದಾರೆ. ಅವರ ಭರ­-­­ವಸೆಗಳು ಕಮರಿಹೋಗಿಲ್ಲ  ಎಂದು ಕೇಜ್ರಿವಾಲ್‌ ಹೇಳಿದ್ದಾರೆ.
ಎನ್‌ಡಿಎ ಭರವಸೆಗಳನ್ನು ನೀಡಿದೆ. ಆದರೆ, ಅವುಗಳನ್ನು ಜಾರಿಗೊಳಿ­ಸುವಲ್ಲಿ ಇಲ್ಲಿಯವರೆಗೆ ನಿಧಾನಗತಿ ಅನುಸರಿ­ಸುತ್ತಿದೆ. ಇಲ್ಲಿಯವರೆಗೆ ಏನೂ ಬದಲಾ­ವ­ಣೆಗಳಾಗಿಲ್ಲ ಎಂದು ಎಲ್ಲರೂ ಹೇಳುತ್ತಿ­ದ್ದಾರೆ ಎಂದು ಕೇಜ್ರಿವಾಲ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಹಿಂದಿನ ಸರ್ಕಾರ (ಯುಪಿಎ) ಏನೂ ಮಾಡಿಲ್ಲ. ಸರ್ಕಾರ ಭ್ರಷ್ಟಾಚಾರದಲ್ಲಿ  ಮುಳುಗಿತ್ತು. ಬೆಲೆ ಏರಿಕೆ ನಿಯಂತ್ರಣ ಸರ್ಕಾರಕ್ಕೆ ಸಾಧ್ಯವಾಗಿ­ರಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT