ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಷಾ ಪ್ರಚಾರ ನಿಷೇಧಕ್ಕೆ ಆಗ್ರಹ

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಚುನಾವಣೆಯನ್ನು ಕೋಮು­ವಾದದ ಮೇಲೆ ಎದುರಿಸಲು ಬಿಜೆಪಿ ಮತ್ತು ಎಸ್‌ಪಿ ಪೈಪೋಟಿ ನಡೆ­ಸಿದ್ದು, ಬೇಕೆಂದೇ ಈ ನಿಟ್ಟಿನಲ್ಲಿ ಕಾರ್ಯ­ಪ್ರವೃತ್ತವಾಗಿದೆ ಎಂದು ಕೇಂದ್ರ ಸಚಿವ ಮತ್ತು ಕಾಂಗ್ರೆಸ್‌ ಮುಖಂಡ ಬೇನಿ ಪ್ರಸಾದ್‌ ವರ್ಮ ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಚುನಾವಣಾ ಆಯೋಗವು ಸ್ವಯಂ ಪ್ರೇರಣೆಯಿಂದ ಈ ಅಂಶವನ್ನು ಗಣನೆಗೆ ತೆಗೆದುಕೊಂಡು, ಬಿಜೆಪಿ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಅವರು ಉತ್ತರಪ್ರದೇಶದಲ್ಲಿ ನಡೆಸುತ್ತಿ­ರುವ ಪ್ರಚಾರದ ಮೇಲೆ ನಿಷೇಧ ಹೇರ­ಬೇಕು ಎಂದು ಅವರು ಆಗ್ರಹಿಸಿದರು.
ಮುಜಫ್ಫರ್‌ನಗರ ಕೋಮು ಗಲ­ಭೆ­ಯಲ್ಲಿ ಬಿಜೆಪಿ ಮತ್ತು ಎಸ್‌ಪಿಯ ನೇರ ಕೈವಾಡವಿದ್ದು, ಅಯೋಧ್ಯೆಯಲ್ಲಿ ‘೮೪ ಕೋಸಿ ಪರಿಕ್ರಮ’ ವಿಫಲವಾದ ನಂತರ ಇವೆರಡೂ ಪಕ್ಷಗಳು ಮುಜಫ್ಫರ್‌ನಗರ­ಗಲಭೆ ಯೋಜಿಸಿದವು. ಈ ಮೂಲಕ ಚುನಾವಣೆಯನ್ನು ಕೋಮುವಾದೀಕ­ರಣ ಮಾಡಲು ಹೊರಟಿವೆ ಎಂದು ಅವರು ಆಪಾದಿಸಿದರು.

೨೦೦೨ರ ಗುಜರಾತ್‌ ಕೋಮು ಗಲಭೆ­­­ಯನ್ನು ಪ್ರಸ್ತಾಪಿಸಿದ ಅವರು, ಇದರಲ್ಲಿ ಮೋದಿ ನಿರಪ­ರಾಧಿ ಆಗಲು ಹೇಗೆ ಸಾಧ್ಯ? ಸುಪ್ರೀಂಕೋರ್ಟ್‌ ಮೇಲೆ ಪ್ರಭಾವ ಬೀರಲು ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡ­ಲಾ­ಗಿದೆ. ಆದರೆ ಅವರು ಜೈಲಿಗೆ ಹೋಗ­ಲಿದ್ದಾರೆ ಎಂದು ಅವರು ಹೇಳಿದರು.

ಜಾಮೀನಿನ ಮೇಲೆ ಬಿಡುಗಡೆ ಆಗಿ­ರುವ ಇನ್ನೊಬ್ಬ ಆರೋಪಿ ಅಮಿತ್‌ ಷಾ ಅವರನ್ನು ಗಂಭೀರ ಆರೋಪಗಳಿ­ದ್ದರೂ ಉತ್ತರಪ್ರದೇಶ ಬಿಜೆಪಿ ಉಸ್ತು­ವಾರಿ­ಯಾಗಿ ನೇಮಿಸಿರುವುದು ಚುನಾ­ವಣೆ-­ಯನ್ನು ಕೋಮುವಾದೀಕರಣಗೊ­ಳಿ­ಸಲು ಎಂದು ಅವರು ಟೀಕಿಸಿದರು.
ಬಿಜೆಪಿಗೆ ಬಹುಮತ ನೀಡಿರುವ ಚುನಾ­ವಣಾ ಸಮೀಕ್ಷೆಗಳನ್ನು ನಿರ್ಲಕ್ಷಿ­ಸು­ವಂತೆ ಜನತೆಗೆ ಕರೆಯಿತ್ತ ಅವರು, ಕಾಂಗ್ರೆಸ್‌ ಮಾತ್ರ ಕೇಂದ್ರದಲ್ಲಿ ಮುಂದಿನ ಸರ್ಕಾರ ರಚಿಸುವುದು ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT