ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಮಷ್ಟಿ ಧ್ವನಿ: ತರೂರ್‌ ಮೆಚ್ಚುಗೆ

Last Updated 4 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿ ಅಚ್ಚರಿ ಮೂಡಿಸಿರುವ ಕಾಂಗ್ರೆಸ್‌ ವಕ್ತಾರ ಶಶಿ ತರೂರ್‌ ಅವರು, ‘ಮೋದಿ ಅವರ ಸಮಷ್ಟಿ ಧ್ವನಿಯನ್ನು ಪ್ರತಿಪಕ್ಷವೇನಾದರೂ ನಿರ್ಲಕ್ಷಿಸಿದರೆ ಅದು ಬುದ್ಧಿಗೇಡಿತನವಾಗುತ್ತದೆ’ ಎಂದಿದ್ದಾರೆ.

ಅಮೆರಿಕನ್‌ ನ್ಯೂಸ್‌ ವೆಬ್‌ಸೈಟ್‌ಗೆ ತಾವೇ ಬರೆದಿರುವ ಲೇಖನದ ಸಂಬಂಧ ಕೇಳಿಬಂದ ಪ್ರಶ್ನೆಗಳಿಗೆ ಉತ್ತರಿಸಿ ಅವರು ಹೀಗೆ ಹೇಳಿದ್ದಾರೆ. ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಅಸಹನೀಯವಾದ ಭಾಷೆಯನ್ನು ಬಳಸಿಲ್ಲ.

ಚುನಾವಣೆಗೆ ಮುಂಚಿನ ಮೋದಿ ಅವರಿಗೂ ನಂತರದ ಮೋದಿ ಅವರಿಗೂ ಭಾರಿ ವ್ಯತ್ಯಾಸವಿದೆ. ಮೋದಿ ಅವರಲ್ಲಿ ಪರಿವರ್ತನೆ ಆಗಿದ್ದು, ಅವರೀಗ ಯಾವುದೇ ಅತಿರೇಕಗಳಿಗೆ ಆತುಕೊಳ್ಳದೆ ಎಲ್ಲರನ್ನೂ ಒಳಗೊಳ್ಳಿಸಿಕೊಳ್ಳುವ ನಾಯಕತ್ವದ ಮಹತ್ವ ಅರಿತಂತೆ ತೋರುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT