ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ–ಮೂಲ ಸ್ವರೂಪ ಉಳಿಸಲು ಸಲಹೆ

Last Updated 17 ಡಿಸೆಂಬರ್ 2013, 8:03 IST
ಅಕ್ಷರ ಗಾತ್ರ

ಪುತ್ತೂರು: ಯಕ್ಷಗಾನ ಕಲೆಯನ್ನು ಅದರ ಸಾಂಸ್ಕೃತಿಕ ಮೂಲ ಸ್ವರೂಪದಲ್ಲಿ ಉಳಿಸಿ ಬೆಳೆಸಲು ಚಿಂತನೆ ನಡೆಯಬೇಕಾಗಿದೆ. ಯಕ್ಷಗಾನಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾಗಿದೆ ಎಂದು ಯಕ್ಷಗಾನ ವಿಮರ್ಶಕ ಡಾ. ಪ್ರಭಾಕರ ಜೋಷಿ ಹೇಳಿದರು.

ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಭಾನುವಾರ ಸಂಜೆ  ಆಂಜನೇಯ ಯಕ್ಷಗಾನ ಕಲಾಸಂಘ, ಆಂಜನೇಯ ಮಹಿಳಾ ಯಕ್ಷಗಾನ ಸಂಘ ಮತ್ತು ಆಂಜನೇಯ ಯಕ್ಷಗಾನ ತರಬೇತಿ ಕೇಂದ್ರದ ವತಿಯಿಂದ ನಡೆದ `ಶ್ರೀ ಆಂಜನೇಯ- 45’ ಕಾರ್ಯಕ್ರಮದಲ್ಲಿ ಹಿರಿಯ ಮದ್ದಳೆಗಾರ ನೀಲೇಶ್ವರದ ಗೋಪಾಲಕೃಷ್ಣ ಕುರುಪ್ ಅವರಿಗೆ `ಯಕ್ಷಾಂಜನೇಯ’ ಪ್ರಶಸ್ತಿ ಮತ್ತು ಹಿರಿಯ ಯಕ್ಷಗಾನ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಅವರಿಗೆ `ಬೊಳ್ಳಿಂಬಳ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಿದ್ದಾಂತದ ಹಿನ್ನಲೆಯಲ್ಲಿ ಯಕ್ಷಗಾನ ಕಲೆಯನ್ನು ರೂಪಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

ಯಕ್ಷಗಾನ ಕಲಾವಿದ ಡಾ.ಕೆ.ಎಂ. ರಾಘವ ನಂಬಿಯಾರ್ ಮಾತನಾಡಿ, ಮನುಷ್ಯನ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವುದೇ ಯಕ್ಷಭೂಮಿ ಮತ್ತು ರಂಗಭೂಮಿಯ ಉದ್ದೇಶ. ಸಮಾಜದ ಪ್ರತಿಬಿಂಬ­ವನ್ನು ಅವಲಂಬಿಸಿಕೊಂಡು ರಂಗ­ಭೂಮಿಯನ್ನು ಮರಳಿ ಕಟ್ಟುವ ಕೆಲಸವಾಗಬೇಕು ಎಂದರು. 

ಗೋಪಾಲಕೃಷ್ಣ ಕುರುಪ್ ಮಾತನಾಡಿ, ಯಕ್ಷಗಾನದ ಮೂಲ ಸ್ವರೂಪ ಬದಲಾಗುತ್ತಿದ್ದು, ಪೂರ್ವರಂಗವನ್ನು ಉಳಿಸುವ ಯುವಜನತೆ ಕಾರ್ಯೋನ್ಮುಖರಾಬೇಕಾಗಿದೆ ಎಂದರು.

ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿದ್ದರು.  ರೆಂಜಾಳ ರಾಮಕೃಷ್ಣ ರಾವ್ ಪುತ್ತೂರು ಎ.ಸಿ ಹೆಚ್.ಕೆ.ಕೃಷ್ಣಮೂರ್ತಿ, ದೇವ­ಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಸ್. ಓಕು­ಣ್ಣಾಯ ,,ವೈದ್ಯೆ ಡಾ. ಸುಧಾ ಎಸ್ ರಾವ್ ಮಾತ­ನಾಡಿದರು.

ಚಿದಾನಂದ ಕಾಮತ್ ಕಾಸರಗೋಡು ಮತ್ತು  ಶೋಭಿತಾ ಸತೀಶ್ ರಾವ್ ಅವರನ್ನು ಸನ್ಮಾನಿಸಲಾಯಿತು. ಆಂಜನೇಯ ಯಕ್ಷಗಾನ ಕಲಾ­ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಗೌರವ ಅಧ್ಯಕ್ಷ ಪಿ. ರಮಾನಂದ ನಾಯಕ್, ಕಾರ್ಯದರ್ಶಿ ಟಿ.ರಂಗ­ನಾಥ ರಾವ್, ಕರ್ಣಾಟಕ ಬ್ಯಾಂಕಿನ ಉದ್ಯೋಗಿ ಕೃಷ್ಣ ಪ್ರಕಾಶ್ ಉಳಿತ್ತಾಯ, ಜಗನ್ಮೋಹನ ರೈ ರೆಂಜಾಳ, ಉಪ­ನ್ಯಾಸಕ ಗಣರಾಜ ಕುಂಬ್ಳೆ, ದಿವಾಕರ ಆಚಾರ್ಯ ಗೇರುಕಟ್ಟೆ, ಶಿಕ್ಷಕ ಗುಡ್ಡಪ್ಪ ಬಲ್ಯ  ಸಂಘದ ಖಜಾಂಜಿ ದುಗ್ಗಪ್ಪ ಎನ್ ಮತ್ತು ಕವಿತಾ ಅಡೂರು, ಅನಂತಕೃಷ್ಣ ಬರೆಪ್ಪಾಡಿ, ಗೀತಾ ಕೋಂ­ಕೋಡಿ,­ಪ್ರತ್ಯುಷ ಬಾರ್ಯ ,ಮಾಲತಿ ,ನಿವೃತ್ತ ಮುಖ್ಯ ಶಿಕ್ಷಕ ಶರತ್ ಕುಮಾರ್ ಬೆಟ್ಟಂಪಾಡಿ, ರಮೇಶ್ ಬಾಬು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT