ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಪಿಎಸ್‌ಸಿ: ಇಂಗ್ಲಿಷ್‌ ಅಂಕ ಪರಿಗಣನೆ ಇಲ್ಲ– ಅಧಿಸೂಚನೆ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಲೋಕಸೇವಾ ಆಯೋಗ (ಯುಪಿ ಎಸ್‌ಸಿ) ನಾಗರಿಕ ಸೇವೆಗಳಿಗೆ ನಡೆಸುವ ಪೂರ್ವಭಾವಿ ಹಂತದ ಇಂಗ್ಲಿಷ್‌ ಭಾಷೆಯ ಎರಡನೇ ಪತ್ರಿಕೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಭಾಷಾ ಗ್ರಹಿಕೆ ಕುರಿತ ಪ್ರಶ್ನೆಗಳಿಗೆ ಗಳಿಸಿದ ಅಂಕಗಳನ್ನು ಶ್ರೇಣಿ ನಿಗದಿ ವೇಳೆ ಪರಿಗಣಿಸುವುದಿಲ್ಲ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

‘ಪೂರ್ವಭಾವಿ ಹಂತದ ಪರೀಕ್ಷೆ­ಯಲ್ಲಿ ತಲಾ ಗರಿಷ್ಠ 200 ಅಂಕಗಳ ಇಂಗ್ಲಿಷ್‌ ಭಾಷೆಯ ಎರಡು ಪತ್ರಿಕೆಗಳು ಇರುತ್ತವೆ. ಎರಡನೇ ಪತ್ರಿಕೆಯಲ್ಲಿ ಅಭ್ಯರ್ಥಿ­ಗಳ ಇಂಗ್ಲಿಷ್‌ ಭಾಷಾ ಗ್ರಹಿಕೆ­ಯನ್ನು ಪರೀಕ್ಷಿಸಲು 22.5 ಅಂಕಗಳ  ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಮೊದಲ ಪತ್ರಿಕೆಯಲ್ಲಿ ಗರಿಷ್ಠ 200 ಅಂಕಗಳಿಗೆ ಪಡೆದ ಅಂಕ ಗಳು ಹಾಗೂ ಎರಡನೇ ಪತ್ರಿಕೆಯಲ್ಲಿ ಇಂಗ್ಲಿಷ್‌ ಗ್ರಹಿ­ಕೆಗೆ ನಿಗದಿಯಾಗಿರುವ 22.5 ಅಂಕ ಹೊರತುಪಡಿಸಿ, ಅಂದರೆ 178.5 ಅಂಕ­ಗಳಿಗೆ ಪಡೆದ ಅಂಕಗಳನ್ನು  ಪರಿಗಣನೆಗೆ ತೆಗೆದುಕೊಳ್ಳಲಾಗುವುದು’ ಎಂದು  ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿರುವ ಅಧಿಸೂಚನೆ ತಿಳಿಸಿದೆ.

‘ಇಂಗ್ಲಿಷ್‌ ಭಾಷೆಯ ಗ್ರಹಿಕೆ ಕುರಿತ ಪ್ರಶ್ನೆಗಳು ಹತ್ತನೇ ತರಗತಿಯ ಮಟ್ಟದ್ದಾಗಿರುತ್ತದೆ. ಇವುಗಳಿಗೆ ಪಡೆದ ಅಂಕಗಳನ್ನು ನಾಗರಿಕ ಸೇವಾ ಅಧಿಕಾರಿಗಳ ಶ್ರೇಣಿ ನಿಗದಿ ಮಾಡುವಾಗ ಪರಿಗಣಿಸಲಾಗದು. ಅಭ್ಯರ್ಥಿಗಳು ಈ ಪ್ರಶ್ನೆಗಳಿಗೆ ಉತ್ತರಿಸದೆ ಹಾಗೆಯೇ ಬಿಡಬಹುದು’ ಎಂದೂ ಅಧಿಸೂಚನೆ ಹೇಳಿದೆ. ಈ ವರ್ಷದ ಪೂರ್ವಭಾವಿ ಪರೀಕ್ಷೆ ಇದೇ ಭಾನುವಾರ (ಆ. 24) ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT