ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದು ಸರಿ?

Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದಲ್ಲಿರುವ ಒಂದು ಪ್ರಶ್ನೆ, ‘ಮಹಿಳೆಯರ ಸ್ಥಾನಮಾನವನ್ನು ಪರಿಶೀಲಿಸಿ ಆ ದೇಶದ ವ್ಯವಸ್ಥೆಯನ್ನೇ ತಿಳಿಯಬಹುದು- ಈ ಮಾತನ್ನು ಹೇಳಿದವರು ಯಾರು?’ ಎಂದು ಕೇಳಲಾಗಿದೆ.

ಅದಕ್ಕೆ ಉತ್ತರವಾಗಿ ‘ಮಹಾತ್ಮ ಗಾಂಧೀಜಿ’ ಎಂದು ಪ್ರಕಟಿಸಲಾಗಿದೆ. ಆದರೆ ಡಿ.ಎಸ್.ಇ.ಆರ್.ಟಿ.ಯ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಪುಟ ಸಂಖ್ಯೆ 83ರಲ್ಲಿ ಈ ಮಾತನ್ನು ಜವಾಹರಲಾಲ್ ನೆಹರೂ  ಹೇಳಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಇಲಾಖೆಗೆ ಮೇಲ್ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ದೂರವಾಣಿ ಕರೆ ಮಾಡಿದರೆ, ‘ನೀವು ಬೇಕಾದರೆ ಕೋರ್ಟ್‌ಗೆ ಹೋಗಿ’ ಎನ್ನುತ್ತಾರೆ. ಸರ್ಕಾರ ಪ್ರಕಟಿಸಿರುವ ಪುಸ್ತಕದ ಮಾಹಿತಿಯೇ ತಪ್ಪು ಎನ್ನುವುದಾದರೆ, ಯಾವುದನ್ನು ನಂಬುವುದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT