ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಸೀನ್‌ ವಿರುದ್ಧ ಆರೋಪಪಟ್ಟಿ

Last Updated 3 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): 2008 ರ ಸೆ.­13ರಂದು ಇಲ್ಲಿ ನಡೆದಿದ್ದ ಅವಳಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಇಂಡಿ­ಯನ್‌ ಮುಜಾ­ಹಿದ್ದಿನ್‌್ (ಐಎಂ) ಸಂಘ­ಟ­ನೆ ಸಹ ಸಂಸ್ಥಾಪಕ ಯಾಸೀನ್‌ ಭಟ್ಕಳ, ರಿಯಾಜ್‌ ಭಟ್ಕಳ, ಇಕ್ಬಾಲ್‌ ಭಟ್ಕಳ ಸೇರಿದಂತೆ 29 ಶಂಕಿತ ಐಎಂ ಉಗ್ರರ ವಿರುದ್ಧ ದೆಹಲಿ ಪೊಲೀ­ಸರು ಗುರು­ವಾರ ಆರೋಪಪಟ್ಟಿ ದಾಖಲಿಸಿದ್ದಾರೆ.

ಈ ಉಗ್ರರು ಭಯೋತ್ಪಾದಕ ದಾಳಿ ನಡೆಸುವ ಮೂಲಕ ದೇಶದ ಮೇಲೆ ಯುದ್ಧ ಸಾರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ ಪೊಲೀಸರ ವಿಶೇಷ ಘಟಕ ನ್ಯಾಯಾ­ಲಯಕ್ಕೆ ಎರಡು ಪ್ರತ್ಯೇಕ ಆರೋಪ­ಟ್ಟಿ­ಗ­ಳನ್ನು ಸಲ್ಲಿಸಿದೆ.

ಇವುಗ­ಳಲ್ಲಿ ಈ 29 ಆರೋಪಿಗಳು ನಡೆಸಿ­ರುವ ಹಲ­ವಾರು ಶಿಕ್ಷಾರ್ಹ ಅಪರಾಧ­ಗಳ ಬಗ್ಗೆ ವಿವರಿಸಿದ್ದಾರೆ. ಯಾಸೀನ್‌ ಸೇರಿದಂತೆ ಪ್ರಮುಖ ಐಎಂ ಉಗ್ರ­ರಾದ ಆಮೀರ್‌ ರಾಜಾ ಖಾನ್‌, ಅಬು ಅಲಿ ಕೋಮಾ, ಡಾ.ಶಾನ­ವಾಜ್‌, ಮಿರ್ಜಾ ಶಾದಾಬ್‌ ಬೇಗ್‌ ಅವರ ಹೆಸರೂ ಆರೋಪ­ಪಟ್ಟಿಯಲ್ಲಿದೆ.

ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ದಯಾ ಪ್ರಕಾಶ್‌ ವಿಚಾರಣೆಯನ್ನು ಏ.19 ಕ್ಕೆ ಮುಂದೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT