ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಸ್ ಓಪನ್: ಪೇಸ್, ಸಾನಿಯಾ ಸೋಲು

Last Updated 5 ಸೆಪ್ಟೆಂಬರ್ 2015, 8:20 IST
ಅಕ್ಷರ ಗಾತ್ರ

ನ್ಯೂಯಾರ್ಕ್(ಪಿಟಿಐ): ಯುಎಸ್ ಓಪನ್ ಟೂರ್ನಿಯಲ್ಲಿ ಶುಕ್ರವಾರ ಭಾರತೀಯ ಟೆನಿಸ್ ತಾರೆಗಳಾದ ಲಿಯಾಂಡರ್ ಪೇಸ್ ಪುರುಷರ ಡಬಲ್ಸ್ ವಿಭಾಗದಲ್ಲಿ ಹಾಗೂ ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋಲನುಭವಿಸಿದ್ದಾರೆ.

ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಹಾಗೂ ಬ್ರುನೊ ಸೊರಿಸಾ ಜೋಡಿ 3-6, 3-6 ಸೆಟ್ ನಲ್ಲಿ ಚೆಕ್ ಗಣರಾಜ್ಯದ ಆಂಡ್ರೆ ಹವಕೊವಾ ಹಾಗೂ ಲುಕಾಸ್ ಕೊಬೊಟ್ ಜೋಡಿ ವಿರುದ್ಧ ಸೋತರು. ಎರಡು ಜೋಡಿ ಮಧ್ಯೆ 65 ನಿಮಿಷ ಸೆಣಸಾಟ ನಡೆಯಿತು.

ಪುರುಷರ ಡಬಲ್ಸ್ ನಲ್ಲಿ ಲಿಯಾಂಡ್ ಪೇಸ್ ಹಾಗೂ ಫರ್ನಾಂಡೊ ವೆರ್ಡಾಸ್ಕೊ ಜೋಡಿ 5-7, 6-4, 3-6 ಸೆಟ್ ನಲ್ಲಿ ಅಮೆರಿಕದ ಜಾನ್ಸನ್ ಮತ್ತು ಸ್ಯಾಮ್ ಕ್ವೆರ್ರಿ ಜೋಡಿ ವಿರುದ್ಧ ಸೋಲೊಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT