ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಜಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಶಾಲೆಯ ಶಿಕ್ಷಕೇತರ ಸಿಬ್ಬಂದಿಯೊಬ್ಬ ನಾಲ್ಕು ವರ್ಷದ ಬಾಲಕಿ­ಯೊಬ್ಬಳ ಮೇಲೆ ಅತ್ಯಾ­ಚಾರ ನಡೆಸಿರುವ ಘಟನೆ ಭಂದುಪ ಉಪ­­­ನಗರದಲ್ಲಿರುವ ಶಾಲೆ­ಯೊಂ­ದ­ರಲ್ಲಿ ಡಿಸೆಂಬರ್‌ 9 ರಂದು ನಡೆದಿ­ರು­ವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಶಾಲೆ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶಿಕ್ಷಕೇತರ ಸಿಬ್ಬಂದಿಯೊಬ್ಬ ಶಾಲೆಯ ಶೌಚಾ­ಲಯದಲ್ಲಿ ಅತ್ಯಾಚಾರ ನಡೆಸಿರು­ವು­ದನ್ನು ಯುಕೆಜಿ ವಿದ್ಯಾರ್ಥಿನಿ ತನ್ನ ಪಾಲ­ಕ­­ರಿಗೆ ತಿಳಿಸಿದ್ದಾಳೆ. ಪಾಲಕರು ದೂರು ನೀಡಿ­ರುವ ಆರೋಪದ ಮೇಲೆ ಶಾಲೆಯ ಶಿಕ್ಷಕೇತರ ಸಿಬ್ಬಂದಿಯನ್ನು ಬುಧವಾರ ಬಂಧಿಸ­ಲಾ­ಗಿದೆ ಎಂದು ಭಂದುಪ ಪೊಲೀಸ್‌ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT