ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ಹೆಚ್ಚುವರಿ ಅವಕಾಶ

Last Updated 27 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಲೋಕಸೇವಾ ಆಯೋಗ (ಯುಪಿ­ಎಸ್‌ಸಿ) ಪರೀಕ್ಷೆ ಬರೆಯುವ ಅಭ್ಯರ್ಥಿ­ಗಳಿಗೆ ಈ ವರ್ಷದಿಂದ ಎರಡು ಅವಕಾಶ­ಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ ಎಂದು ಯುಪಿಎಸ್‌ಸಿ ಮಂಗಳವಾರ ತಿಳಿಸಿದೆ.

ಆದರೆ, ಯುಪಿಎಸ್‌ಸಿ ಪಠ್ಯಕ್ರಮ ಮತ್ತು ಸ್ವರೂಪದಲ್ಲಿ ಯಾವುದೇ ಬದ­ಲಾವಣೆ ಇಲ್ಲ ಎಂದು ಆಯೋಗ ಸ್ಪಷ್ಟನೆ ನೀಡಿದೆ. 2014ರ ನಾಗರಿಕ ಸೇವಾ ಪರೀಕ್ಷೆ­ಯಿಂದಲೇ ಇದು ಜಾರಿ­ಯಾಗ­ಲಿದೆ. ಇನ್ನು ಮುಂದೆ ಸಾಮಾನ್ಯ ಅಭ್ಯರ್ಥಿ­ಗಳು ಗರಿಷ್ಠ ನಾಲ್ಕು ಸಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸ­ಲಾಗಿದೆ.

(ಈ ಹಿಂದೆ ಎರಡು ಬಾರಿ ಮಾತ್ರ ಪರೀಕ್ಷೆ ಬರೆ­ಯುವ ಅವಕಾಶ­ವಿತ್ತು) ಇತರ ಹಿಂದು­ಳಿದ ವರ್ಗದ (ಒಬಿಸಿ) ಅಭ್ಯರ್ಥಿಗಳು ಏಳು ಬಾರಿ ಪರೀಕ್ಷೆ ಬರೆಯಬಹುದು. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗ­ಡದ ಅಭ್ಯರ್ಥಿಗಳಿಗೆ ಮಿತಿ ಇಲ್ಲ ಎಂದು ಪ್ರಕಟಣೆ ತಿಳಿಸಿದೆ.

2014ರ ಆಗಸ್ಟ್ 24ರಂದು ಯುಪಿಎಸ್‌ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿಗೆ ‘ಎಂಪ್ಲಾಯಿಮೆಂಟ್‌ ನ್ಯೂಸ್‌’ ಪತ್ರಿಕೆ ಅಥವಾ ವೆಬ್‌ಸೈಟ್‌: www.upsc.gov.in ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT