ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಿಸಿಇ ಶುಲ್ಕ ಹೆಚ್ಚಳ: ಪ್ರತಿಭಟನೆ

Last Updated 26 ಆಗಸ್ಟ್ 2014, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿ-ನಿಯರಿಂಗ್‌ನಲ್ಲಿ (ಯುವಿಸಿಇ) ಶುಲ್ಕ-ವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಒ) ನೇತೃತ್ವ-ದಲ್ಲಿ ವಿದ್ಯಾರ್ಥಿಗಳು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಕುಲಪತಿ ಕಚೇರಿ ಎದುರು ಮಂಗಳವಾರ  ಪ್ರತಿಭಟನೆ ನಡೆಸಿದರು.

‘ಕಾಲೇಜಿನಲ್ಲಿ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿ-ದ್ದಾರೆ. ಅವರಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ-ವರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ವಿಶ್ವವಿದ್ಯಾಲಯ ಏಕಾಏಕಿಯಾಗಿ ಶುಲ್ಕ ಹೆಚ್ಚಳ ಮಾಡಿದೆ’ ಎಂದು ಪ್ರತಿಭಟನಾ-ಕಾರರು ದೂರಿದರು.

‘ಈ ಹಿಂದೆ ಶುಲ್ಕ ₨1,255 ಇತ್ತು. ಈಗ ₨24,000 ಆಗಿದೆ. ಅಭಿವೃದ್ಧಿ ಶುಲ್ಕವಾಗಿ ₨5,000 ಪಡೆಯ-ಲಾಗು-ತ್ತಿದೆ. ಆದರೆ, ಕೆಲವು ವರ್ಷ-ಗಳಿಂದ ಕಾಲೇಜಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ವಿದ್ಯಾರ್ಥಿ-ಗಳಿಂದ ಹೆಚ್ಚುವರಿ ಶುಲ್ಕ ಸಂಗ್ರಹ ಮಾಡ-ಬಾರದು ಎಂದು ರಾಜ್ಯ ಸರ್ಕಾರ ಆಗಸ್ಟ್‌ 6ರಂದು ಆದೇಶ ಹೊರಡಿದೆ. ಆದರೂ ವಿವಿ ಶುಲ್ಕ ಹೆಚ್ಚಿಸಿದೆ’ ಎಂದು ಪ್ರತಿಭಟನಾಕಾರರು ದೂರಿದರು.
ಸ್ಥಳಕ್ಕೆ ಕುಲಪತಿ ಪ್ರೊ. ಬಿ.ತಿಮ್ಮೇ-ಗೌಡ, ಕುಲಸಚಿವರಾದ ಸೀತಮ್ಮ, ಕುಲಸಚಿವ (ಮೌಲ್ಯಮಾಪನ) ಪ್ರೊ. ನಿಂಗೇಗೌಡ ಬಂದು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು.

ಕುಲಪತಿ ವಾದ: ‘ಈ ಹಿಂದೆ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕವನ್ನು ವಿವಿಗೆ ರಾಜ್ಯ ಸರ್ಕಾರ  ಪಾವತಿ ಮಾಡು-ತ್ತಿತ್ತು. ರಾಜ್ಯ ಸರ್ಕಾರ 2013ರ ಜೂನ್‌ 13ರಂದು ಸರ್ಕಾರ ಆದೇಶ ಹೊರಡಿಸಿ ಪ್ರವೇಶದ ವೇಳೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಂಪೂರ್ಣ ಶುಲ್ಕ ಭರಿಸ--ಬೇಕು. ಬಳಿಕ ಶುಲ್ಕವನ್ನು ವಿದ್ಯಾ-ರ್ಥಿ-ಗಳಿಗೆ ಪಾವತಿ ಮಾಡಲಾಗುವುದು ಎಂದು ತಿಳಿಸಿತ್ತು. ಹೀಗಾಗಿ ವಿದ್ಯಾರ್ಥಿ-ಗಳಿಂದ ಪೂರ್ಣ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಬಳಿಕ ಅದು ವಿದ್ಯಾರ್ಥಿಗಳಿಗೆ ಮರು-ಪಾವತಿ ಆಗಲಿದೆ’ ಎಂದು  ಕುಲಪತಿ ಪ್ರೊ. ಬಿ.ತಿಮ್ಮೇಗೌಡ ಸ್ಪಷ್ಟಪಡಿಸಿದರು.

‘ಒಂದು ವೇಳೆ ಸರ್ಕಾರ ಶುಲ್ಕ ಮರು-ಪಾವತಿ ಮಾಡದಿದ್ದರೆ ವಿವಿ ಸಂಕಷ್ಟಕ್ಕೆ ಸಿಲುಕುತ್ತದೆ. ಸರ್ಕಾರ ಶುಲ್ಕ ಪಾವತಿ ಮಾಡದಿದ್ದರೆ ತಾವೇ ಭರಿಸು-ವುದಾಗಿ ವಿದ್ಯಾರ್ಥಿಗಳು ಬರೆದು ಕೊಡಬೇಕು. ಆಗ ಹಿಂದಿನಂತೆಯೇ ಶುಲ್ಕ ಸಂಗ್ರಹ ಮಾಡಲಾಗುವುದು’ ಎಂದು ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ಇದಕ್ಕೆ ವಿದ್ಯಾರ್ಥಿಗಳು ಒಪ್ಪಲಿಲ್ಲ. ‘ಇದು ನ್ಯಾಯಬದ್ಧವಾದುದು ಅಲ್ಲ. ವಿದ್ಯಾರ್ಥಿಗಳ ಮೇಲೆ ಹೊರೆ ಹಾಕು-ವುದು ಸರಿಯಲ್ಲ’ ಎಂದು ವಿದ್ಯಾರ್ಥಿ-ಗಳು ಮನವಿ ಮಾಡಿದರು. ವಿದ್ಯಾರ್ಥಿ-ಗಳ ಬೇಡಿಕೆಯನ್ನು ಕುಲಪತಿ ಅವರು ಒಪ್ಪಲಿಲ್ಲ.

‘ಕುಲಪತಿ ಸಲಹೆ ವಿಚಿತ್ರ-ವಾದುದು. ಇದನ್ನು ಒಪ್ಪಲು ಸಾಧ್ಯ-ವಿಲ್ಲ. ಅಲ್ಲದೆ ಸಮಸ್ಯೆಗೆ ಸಮರ್ಪಕ ಪರಿಹಾರ ಸೂಚಿಸದೆ ಅರ್ಧದಲ್ಲೇ ನಿರ್ಗಮಿಸಿ-ದರು. ಹೀಗಾಗಿ ಹೋರಾಟ ಮುಂದು-ವರಿಸಲಾಗುವುದು’ ಎಂದು ಎಐಡಿ-ಎಸ್‌ಒ ಮುಖಂಡ ರವಿನಂದನ್‌ ತಿಳಿಸಿ-ದರು. ಸುಮಾರು 900ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆ-ಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT