ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುುಪಿಎಗಿಂತ ಉತ್ತಮ

ಅಕ್ಷರ ಗಾತ್ರ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಯಿತು. ಚುನಾವಣೆ ವೇಳೆ ಹಲವಾರು ಭರವಸೆಗಳನ್ನು ನೀಡಿ ಅಧಿಕಾರದ ಗದ್ದುಗೆ ಹಿಡಿದ ಸರ್ಕಾರ, ಭರವಸೆಗಳನ್ನು ಈಡೇರಿಸುವ ಪಥದಲ್ಲಿ ಸಾಗುತ್ತಿದೆ. ದೇಶದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಒಂದು ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತ ನೀಡಿರುವುದು ಗಮನಾರ್ಹ.

ಬುಲೆಟ್ ರೈಲು, ಸ್ಮಾರ್ಟ್‌ ಸಿಟಿಗಳ ನಿರ್ಮಾಣ, ಸ್ವಚ್ಛ ಭಾರತ ಮೊದಲಾದವುಗಳ ಮೂಲಕ ದೇಶವನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಲು ಪ್ರಧಾನಿ  ಹೊರಟಿದ್ದಾರೆ. ಆದರೆ ಕೆಲ ವಿಷಯಗಳಲ್ಲಿ ನುಡಿದಂತೆ ನಡೆಯಲು ಅವರಿಗೆ ಆಗಿಲ್ಲ. ಆದರೂ ಎನ್‌ಡಿಎ ಸರ್ಕಾರದ ವೇಗ, ಹಿಂದಿದ್ದ ಯುಪಿಎ ಸರ್ಕಾರದ ವೇಗದ ದುಪ್ಪಟ್ಟಿನಷ್ಟು.   ಆದರೆ ಬಿಜೆಪಿ ನಾಯಕರ ಪ್ರಚೋದನಾತ್ಮಕ ಹಾಗೂ ವಿವಾದಾತ್ಮಕ ಹೇಳಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಇಲ್ಲವಾದರೆ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT