ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೋಪ್‌ಗೆ ‘ಲಿಂಗ’ ತಂಡ

ಪಂಚರಂಗಿ
Last Updated 10 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯಿಸುತ್ತಿರುವ, ಕನ್ನಡದ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ 'ಲಿಂಗಾ' ಚಿತ್ರ ತಂಡ ಇದೀಗ ಯುರೋಪ್‌ನತ್ತ ಹೆಜ್ಜೆ ಹಾಕುತ್ತಿದೆ.

ಕರ್ನಾಟಕದ ಶಿವಮೊಗ್ಗ, ಕೊಲ್ಲೂರು, ಲಿಂಗನಮಕ್ಕಿ, ಜೋಗ ಸೇರಿದಂತೆ ಹಲವು ಕಡೆ ಚಿತ್ರೀಕರಣ ಸಾಗಿದ್ದು, ಹಾಡುಗಳ ಚಿತ್ರೀಕರಣಕ್ಕಾಗಿ ಈ ತಂಡ ಯುರೋಪ್‌ ಕಡೆಗೆ ಸಾಗಲಿದೆ.

‘ಚಿತ್ರದ ಹೆಚ್ಚಿನ ಭಾಗವನ್ನು ಕರ್ನಾಟಕ ಭಾಗಗಳಲ್ಲಿ ಮಾಡಲಾಗಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡಿಗಾಗಿ ಯುರೋಪ್‌ಗೆ ಹೊರಡುವ ತಯಾರಿಯಲ್ಲಿದ್ದೇವೆ’ ಎಂದಿದ್ದಾರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್. ಡಿಸೆಂಬರ್ 12 ರಜನಿ ಹುಟ್ಟಿದ ದಿನ. ಅದೇ ದಿನ ಆಡಿಯೊ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ. ದೀಪಾವಳಿ ಹೊತ್ತಿಗೆ ಚಿತ್ರರಸಿಕರ ಮುಂದೆ ಬರಲಿದೆ ಸಿನಿಮಾ.

ರಜನಿ ಜತೆ ಪಡೆಯಪ್ಪ, ಮುತ್ತು ಚಿತ್ರಗಳಲ್ಲಿ ಕೆಲಸ ಮಾಡಿದ ಕೆ.ಎಸ್.ರವಿಕುಮಾರ್ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಅನುಷ್ಕಾ ಶೆಟ್ಟಿ, ಜಗಪತಿ ಬಾಬು, ಸಂತಾನಂ, ದೇವ್ ಗಿಲ್, ಮನೋಬಲ ಮುಂತಾದವರು ಚಿತ್ರ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT