ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಮನ್‌ನಿಂದ 350 ಭಾರತೀಯರ ರಕ್ಷಣೆ

Last Updated 1 ಏಪ್ರಿಲ್ 2015, 4:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಯೆಮನ್‌ನಲ್ಲಿ ತೊಂದರೆಗೆ ಸಿಲುಕಿದ್ದ್ದ ಭಾರತೀಯರಲ್ಲಿ ಇದುವರೆಗೆ 350 ಮಂದಿಯನ್ನು ರಕ್ಷಿಸಲಾಗಿದ್ದು, ಇವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಪ್ರಯತ್ನ ನಡೆದಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಯೆಮನ್‌ನ ಬಂದರು ನಗರಿ ಆ್ಯಡೆನ್‌ನಲ್ಲಿ ಸಿಲುಕಿದ್ದ ಭಾರತೀಯರಲ್ಲಿ 350 ಮಂದಿಯನ್ನು ರಕ್ಷಿಸಲಾಗಿದೆ. ಇವರಲ್ಲಿ 220 ಪುರುಷರು,101 ಮಹಿಳೆಯರು ಮತ್ತು 28 ಮಕ್ಕಳು ಸೇರಿದ್ದಾರೆ. ನೌಕಾಪಡೆಗೆ ಸೇರಿದ ಐಎನ್‌ಎಸ್‌ ಸುಮಿತ್ರಾ ಹಡಗಿನಲ್ಲಿ ಇವರನ್ನು ಸ್ವದೇಶಕ್ಕೆ  ಕರೆತರಲಾಗುತ್ತಿದೆ. ಈ ಹಡಗು ಮಂಗಳವಾರ ರಾತ್ರಿಯೇ ಆ್ಯಡೆನ್‌ನಿಂದ ಹೊರಟಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೊಂದರೆಗೆ ಸಿಲುಕಿರುವ ಭಾರತೀಯರು ಡಿಜಿಬೋಟಿ ನಗರದಲ್ಲಿ  ಸೇರಿದ್ದು, ಅಲ್ಲಿಂದ ಏರ್‌ ಇಂಡಿಯಾ ವಿಮಾನದ ಮೂಲಕವೂ ಅನೇಕರನ್ನು ಕರೆತರುವ ಪ್ರಯತ್ನವೂ ಮುಂದುವರಿದಿದೆ ಎಂದು ಅವರು ತಿಳಿಸಿದರು.

ಭಾರತೀಯರ ರಕ್ಷಣೆಗಾಗಿ ನೌಕಾಪಡೆಗೆ ಸೇರಿದ ಎರಡು ಹಡಗುಗಳನ್ನು ಯೆಮನ್‌ಗೆ ಕಳುಹಿಸಲಾಗಿದೆ. ಈ ಕಾರ್ಯಾಚಾರಣೆಗೆ ‘ಆಪ್‌ ರಾಹತ್‌’ ಎಂದು ಹೆಸರಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT