ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆಗಳ ಮರುನಾಮಕರಣ ಬೇಡ: ಪ್ರಧಾನಿ

Last Updated 30 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಹಿಂದಿನ ಸರ್ಕಾರದ ಯೋಜನೆಗಳನ್ನು ಪುನರ್‌ ನಾಮಕರಣ ಮಾಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟು­ನಿಟ್ಟಿನ ಸೂಚನೆ ನೀಡಿದ್ದಾರೆ.

ಯಾವುದೇ ಯೋಜನೆಗಳ ಹೆಸರನ್ನು ಪುನರ್‌ ನಾಮಕರಣ ಮಾಡಿ ಸಮಯ ವ್ಯರ್ಥ ಮಾಡುವುದು ಬೇಡ. ಬದಲಾಗಿ ಆಡಳಿತ ಚುರುಕುಗೊಳಿಸುವ ಕಡೆ ಗಮನ ಕೊಡಿ ಎಂದಿದ್ದಾರೆ.

ಹೈದರಾಬಾದ್‌ ವಿಮಾನ ನಿಲ್ದಾಣದ ಹೆಸರು ಬದಲಾವಣೆ ಮಾಡುವ ಇಚ್ಛೆ­ಯನ್ನು ವಿಮಾನಯಾನ ಸಚಿವ ಗಜಪತಿ­ರಾಜು ವ್ಯಕ್ತಪಡಿಸಿದ್ದರು. ಹಾಗೆಯೇ ಜವಾಹರಲಾಲ್‌ ನೆಹರೂ ನಗರ ಪುನರ್‌ನವೀಕರಣ ಯೋಜನೆ (ಜೆ–ನರ್ಮ್) ಹೆಸರು ಬದ­ಲಾ­ವಣೆ ಮಾಡುವ ಇಂಗಿತವನ್ನು ನಗರಾ­ಭಿ­ವೃದ್ಧಿ ಸಚಿವ ವೆಂಕಯ್ಯನಾಯ್ಡು ನೀಡಿದ್ದರು.

‘ಯೋಜನೆಗಳ ಹೆಸರು ಬದಲಾಯಿ­ಸುವ ಕೆಲಸಕ್ಕೆ ಕೈ ಹಾಕಬೇಡಿ. ಈ ಕೆಲಸಗಳನ್ನು ಮಾಡುತ್ತಾ ಹೋದರೆ ಕೊನೆಯೇ ಇರುವುದಿಲ್ಲ’ ಎಂದು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದಾರೆ.

ಮೋದಿ ಆರಂಭದಲ್ಲೇ ಎಲ್ಲ ಸರ್ಕಾರ­ಗಳು ಒಂದಲ್ಲಾ ಒಂದು ಒಳ್ಳೆಯ ಕೆಲಸ ಮಾಡಿರುತ್ತವೆ. ಹಿಂದಿನ ಸರ್ಕಾರದ ಎಲ್ಲಾ ಒಳ್ಳೆಯ ಕೆಲಸಗಳನ್ನು ಉಳಿಸಿ­ಕೊಳ್ಳುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT